ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಜನನಿಬಿಡ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ಹಾಸಿಗೆ ಹಾಕಿ ಮಲಗಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ರಸ್ತೆಯ ಮಧ್ಯದಲ್ಲಿ ಹಾಸಿಗೆ ಹಾಕಿ ವ್ಯಕ್ತಿಯು ಕೈ, ಕಾಲು ಚಾಚಿಕೊಂಡು ಮಲಗಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಆತ ರಸ್ತೆಯ ಮಧ್ಯದಲ್ಲಿಯೇ ನಿದ್ರಿಸುತ್ತಿರುವುದರಿಂದ ಒಂದು ಬಸ್ ಮತ್ತು ಕಾರು ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾರದೆ ಸಿಲುಕಿಕೊಂಡಿದೆ.

ವೈರಲ್ ಆಗಿರುವ ಈ ವಿಡಿಯೊಗೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಈ ವಿಚಿತ್ರ ಘಟನೆಯಲ್ಲಿ, ಆ ವ್ಯಕ್ತಿ ಸಂಚಾರ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾನೆ. ಅವನು ತನ್ನ ಹಾಸಿಗೆಯನ್ನು ರಸ್ತೆಯ ಮಧ್ಯದಲ್ಲಿಯೇ ಇಟ್ಟು ಅದರ ಮೇಲೆ ಮಲಗಿದ್ದಾನೆ. ಪ್ರಯಾಣಿಕರು ಮತ್ತು ದಾರಿಹೋಕರು ದೃಶ್ಯಗಳನ್ನು ನೋಡಿ ದಿಗ್ಭ್ರಮೆಗೊಂಡರು. ಅವರಲ್ಲಿ ಒಬ್ಬರು ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಅವನು ರಸ್ತೆಯಲ್ಲಿ ಮಲಗಿದ್ದರಿಂದ ಉಂಟಾದ ಸಂಚಾರ ದಟ್ಟಣೆಯನ್ನು ವಿಡಿಯೊದಲ್ಲಿ ನೋಡಬಹುದು.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಇಂತಹ ನಡವಳಿಕೆ ಸಂಪೂರ್ಣವಾಗಿ ಅಜಾಗರೂಕ ಮತ್ತು ಸ್ವೀಕಾರಾರ್ಹವಲ್ಲ. ಆ ವ್ಯಕ್ತಿ ಮಾನಸಿಕವಾಗಿ ಅಸ್ಥಸ್ಥನಾಗಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಈ ಕೃತ್ಯದಲ್ಲಿ ತೊಡಗಿರಬಹುದು. ಇದು ಅವನ ಜೀವಕ್ಕೆ ಅಪಾಯವನ್ನುಂಟುಮಾಡುವ ಅತ್ಯಂತ ಬೇಜವಾಬ್ದಾರಿಯುತ ಕ್ರಮವಾಗಿದೆ. ಅಲ್ಲದೆ ಇದರಿಂದ ಇತರೆ ಪ್ರಯಾಣಿಕರಿಗೂ ಅಪಾಯವನ್ನುಂಟುಮಾಡುತ್ತದೆ. ಒಂದು ವಾಹನ ಆಕಸ್ಮಿಕವಾಗಿ ಅವನಿಗೆ ಡಿಕ್ಕಿ ಹೊಡೆದರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ? ರಸ್ತೆಯನ್ನು ಬಳಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ಚಾಲಕನೋ ಅಥವಾ ಈ ಅಪಾಯವನ್ನು ಸೃಷ್ಟಿಸಿದ ವ್ಯಕ್ತಿಯನ್ನು ಮಾಡಲಾಗುತ್ತದೆಯೇ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!