ಉದಯವಾಹಿನಿ, ಧಾರವಾಡ: ಯೂಟ್ಯೂಬರ್ ಕಾಮಿಡಿ ಸ್ಟಾರ್ ಮುಕಳೆಪ್ಪನ ಹೆಂಡತಿ ಗಾಯತ್ರಿಯ ಮತ್ತೊಂದು ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಗಾಯತ್ರಿ ಹಾಗೂ ಆಕೆಯ ತಾಯಿ ಫೋನ್‌ನಲ್ಲಿ ಮಾತಾಡಿದ ಆಡಿಯೋ ಸೇರಿಸಿ ಹರಿಬಿಡಲಾಗಿದೆ.ಯಾರ್‍ಯಾರೋ ತನ್ನ ತಾಯಿ ಮನೆಗೆ ಬಂದು ಏನೋ ಹೇಳಿ ಹೋಗುತ್ತಿದ್ದಾರೆ. ಇದರ ಬಗ್ಗೆ ಹಾಗೂ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಯಾರು ಎಂಬುದನ್ನು ಗಾಯತ್ರಿ ತನ್ನ ತಾಯಿ ಜೊತೆ ಫೋನ್‌ನಲ್ಲಿ ಚರ್ಚಿಸಿದ್ದಾಳೆ. ಅದರ ಆಡಿಯೋವನ್ನು ಗಾಯತ್ರಿ ಶೇರ್ ಮಾಡಿಕೊಂಡಿದ್ದಾಳೆ. ಆಡಿಯೋದಲ್ಲಿ ಗಾಯತ್ರಿಯ ತಾಯಿ, ನಿನ್ನನ್ನು ಮದುವೆ ಮಾಡಿಕೊಂಡು ಹೋದವರು ನಿನಗೆ ಏನು ಕೊಟ್ಟಿದ್ದಾರೆ? ನೀನು ಅವರ ಹೆಂಡತಿ ಎನ್ನುವುದಕ್ಕೆ ಏನು ಸಾಕ್ಷಿ ಇದೆ ಎಂದು ಕೇಳಿದ್ದಾಳೆ. ಅಲ್ಲದೇ ನನಗೆ ನಿನ್ನ ಮರ್ಯಾದೆ ಹರಾಜು ಹಾಕಲು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದಾಳೆ.
ಈ ವೇಳೆ ಗಾಯತ್ರಿ ನನಗೆ ಬಂಗಾರದ ಒಡವೆ, ತಾಳಿಯನ್ನು ಮಾಡಿಸಿಕೊಟ್ಟಿದ್ದಾರೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ. ಯಾರಾದ್ರೂ ಬರಲಿ ಏನಾದ್ರೂ ಹೇಳಲಿ, ನೀವು ಸುಮ್ಮನೆ ಇರಿ. ಮನೆ ಬಾಗಿಲು ಸಹ ತೆಗೆಯ ಬೇಡಿ ಎಂದು ತಾಯಿ ಬಳಿ ಗಾಯತ್ರಿ ಮನವಿ ಮಾಡಿದ್ದಾಳೆ.
