ಉದಯವಾಹಿನಿ, ನವದೆಹಲಿ: ಅಫ್ಘಾನಿಸ್ತಾನದ (Afghanistan) 13 ವರ್ಷದ ಬಾಲಕನೊಬ್ಬ ಕಾಬೂಲ್‌ನಿಂದ (Kabul) ದೆಹಲಿಗೆ (Delhi) ವಿಮಾನದ ಚಕ್ರದ ಬಳಿ ಅಡಗಿಕೊಂಡು ಪ್ರಯಾಣಿಸಿ ಸುರಕ್ಷಿತವಾಗಿ ಇಳಿದ ಘಟನೆ ಭಾನುವಾರ ನಡೆದಿದೆ. ಈ ಅಚ್ಚರಿಯ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ KAM ಏರ್‌ನ RQ4401 ವಿಮಾನದಲ್ಲಿ ನಡೆದಿದೆ. ಏರ್‌ಬಸ್ ಎ340 ವಿಮಾನ ಕಾಬೂಲ್‌ನಿಂದ ಬೆಳಗ್ಗೆ 8:46ಕ್ಕೆ ಹೊರಟು ದೆಹಲಿಯ ಟರ್ಮಿನಲ್ 3ರಲ್ಲಿ 10:20ಕ್ಕೆ ಇಳಿಯಿತು. ಕುರ್ತಾ-ಪೈಜಾಮಾ ಧರಿಸಿದ ಬಾಲಕ ಇರಾನ್‌ಗೆ ಹೋಗಲು ಬಯಸಿದ್ದ. ಆದರೆ ತಪ್ಪಾಗಿ ಈ ವಿಮಾನವನ್ನು ಹತ್ತಿದ. ಪ್ರಯಾಣಿಕರು ಏರಿದ ನಂತರ ಅವನು ಚಕ್ರದ ಬಳಿ ಅಡಗಿಕೊಂಡಿದ್ದ. 94 ನಿಮಿಷಗಳ ಪ್ರಯಾಣದಲ್ಲಿ ಅವನು ಬದುಕುಳಿದಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.
ವಿಮಾನ ದೆಹಲಿಯಲ್ಲಿ ಇಳಿದ ನಂತರ, ಟರ್ಮಿನಲ್ 3ರ ನಿರ್ಬಂಧಿತ ಪ್ರದೇಶದಲ್ಲಿ ಬಾಲಕ ನಡೆಯುತ್ತಿರುವುದನ್ನು ಸಿಬ್ಬಂದಿ ಗಮನಿಸಿದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅವನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿತು. ಅಪ್ರಾಪ್ತನಾಗಿರುವ ಕಾರಣ ಅವನ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ಕಾಬೂಲ್ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಲೋಪವನ್ನು ಈ ಘಟನೆ ತೋರಿಸಿದೆ.

Leave a Reply

Your email address will not be published. Required fields are marked *

error: Content is protected !!