ಉದಯವಾಹಿನಿ, ನವದೆಹಲಿ: ಭಾರತ (India) ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರ ನಿರ್ವಹಣೆ ಹಾಗೂ ಫಿಟ್‌ನೆಸ್‌ ಬಗ್ಗೆ ತಾವು ಹಾಕಿದ್ದ ಪೋಸ್ಟ್‌ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad Kaif) ಸ್ಪಷ್ಟನೆ ನೀಡಿದ್ದಾರೆ. ನಿಮ್ಮ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ಒಬ್ಬ ಹಿತೈಷಿ ರೂಪದಲ್ಲಿ ತೆಗೆದುಕೊಳ್ಳಿ ಹಾಗೂ ನೀವು ಭಾರತ ತಂಡದ ಪರ ದೊಡ್ಡ ಮ್ಯಾಚ್‌ ವಿನ್ನರ್‌ ಹಾಗೂ ನೀವು ಪಂದ್ಯವನ್ನು ಆಡಿದರೆ ಏನು ಮಾಡಬಹುದೆಂದು ನಮಗೆ ತಿಳಿದಿದೆ ಎಂದು ಕೈಫ್‌ ತಿಳಿಸಿದ್ದಾರೆ.

ಪ್ರಸ್ತುತ ನಡಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು ಡೆತ್‌ ಓವರ್‌ಗಳಲ್ಲಿ ಬೌಲ್‌ ಮಾಡುವುದನ್ನು ನಿರಾಕರಿಸುತ್ತಿದ್ದಾರೆ. ಇತ್ತೀಚೆಗೆ ಫಿಟ್‌ನೆಸ್‌ ಸಮಸ್ಯೆಯನ್ನು ಅನುಭವಿಸಿದ್ದ ಬುಮ್ರಾ ಗಾಯದಿಂದ ತಪ್ಪಿಸಿಕೊಳ್ಳಲು ಪವರ್‌ಪ್ಲೇನಲ್ಲಿಯೇ ಮೂರು ಓವರ್‌ಗಳನ್ನು ಮುಗಿಸುತ್ತಿದ್ದಾರೆ. ಇದರಿಂದ ನಾಯಕ ಸೂರ್ಯಕುಮಾರ್‌ ಯಾದವ್‌ ಹಾಗೂ ಕೋಚ್‌ ಗೌತಮ್‌ ಗಂಭೀರ್‌ಗೆ ದೀರ್ಘಾವಧಿಯಲ್ಲಿ ಹೊಡೆತ ಬೀಳಲಿದೆ ಎಂದು ಮೊಹಮ್ಮದ್‌ ಕೈಫ್‌ ತಮ್ಮ ಪೋಸ್ಟ್‌ನಲ್ಲಿ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!