ಉದಯವಾಹಿನಿ, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 (Bigg Boss 12) ಶುರು ಆಗೋಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ ಹೋಗಬಹುದು ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯಲ್ಲಿ ಮೂಡಿ ಬರ್ತಿರುವ ಬಿಗ್ ಬಾಸ್ ಮನೆಗೆ ಹೋಗುವ ಕೆಲವರ ಸಂಭಾವ್ಯ ಪಟ್ಟಿ ಸದ್ಯಕ್ಕೆ ಲಭ್ಯವಾಗಿದೆ.
ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಓಪನಿಂಗ್‌ಗೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗೋ 18 ಕಂಟೆಸ್ಟೆಂಟ್‌ಗಳು ಯಾರಿರಬಹುದು ಅನ್ನೋ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ.
ಬಿಗ್ ಬಾಸ್ ಸೀಸನ್ 12 ಸಂಭಾವ್ಯ ಪಟ್ಟಿಯಲ್ಲಿ ಖಳನಟ ಕಾಕ್ರೋಚ್ ಸುಧೀ ಹೆಸರು ಕೇಳಿಬಂದಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ನಟ ಶ್ರೇಯಸ್ ಕೆ. ಮಂಜು, ನಿರೂಪಕಿ ಹಾಗೂ ನಟಿ ಜಾಹ್ನವಿ ಕಾರ್ತಿಕ್, ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಹಾಸ್ಯನಟ ಗಿಲ್ಲಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. ಇನ್ನು ಮನದ ಕಡಲು ನಟಿ ರಾಶಿಕ ಶೆಟ್ಟಿ, ಕರವೇ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯ ಶೈವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ನಟಿ ಸ್ಪಂದನ ಸೋಮಣ್ಣ, ಆರ್.ಜೆ. ಅಮಿತ್, ನಟಿ ಮೌನ ಗುಡ್ಡೆಮನೆ, ಡಾಗ್ ಸತೀಶ್, ಮಂಜು ಭಾಷಿಣಿ ಕಿರುತೆರೆ ನಟಿ ಇನ್ನು ಮುಂತಾದ ಹೆಸರುಗಳು ಕೇಳಿಬಂದಿವೆ. ಆದರೆ, ಇದು ಅಧಿಕೃತ ಪಟ್ಟಿಯಲ್ಲ. ಈ ಪಟ್ಟಿಯಲ್ಲಿರುವ ಹೆಸರುಗಳು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಘೋಷಣೆಗೆ ಇನ್ನು ಕೆಲವು ಗಂಟೆಗಳು ಕಾಯಬೇಕಿದೆ.

Leave a Reply

Your email address will not be published. Required fields are marked *

error: Content is protected !!