ಉದಯವಾಹಿನಿ, ಮದ್ವೆ ವಿಚಾರಕ್ಕೆ ಬಹುಭಾಷಾ ನಟಿ ತ್ರಿಶಾ ಸುದ್ದಿಯಲ್ಲಿದ್ದಾರೆ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿ. ನಟ ಪುನೀತ್ ರಾಜ್‌ಕುಮಾರ್ ಅಭಿನಯದ ʻಪವರ್‌ʼ ಸಿನಿಮಾದಲ್ಲಿ ನಾಯಕಿ ಕನ್ನಡಿಗರ ಮನ ಗೆದ್ದಿದ್ದರು.
ಸೋಷಿಯಲ್‌ ಮೀಡಿಯಾದಲ್ಲಿ ನಟಿ 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಚಂಡೀಗಢ ಮೂಲದ ಉದ್ಯಮಿಯೊಂದಿಗೆ ನಟಿ ಹಸೆಮಣೆ ಏರುತ್ತಿದ್ದಂತೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ನಟಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ʻಜನ ನನಗಾಗಿ ನನ್ನ ಲೈಫ್‌ ಪ್ಲ್ಯಾನ್‌ ಮಾಡಿದಾಗ ನನಗೆ ತುಂಬಾ ಇಷ್ಟ. ಅವ್ರು ನನ್ನ ಹನಿಮೂನ್‌ ಸಹ‌ ನಿಗದಿಮಾಡೋದನ್ನೂ ಕಾಯ್ತಿದ್ದೀನಿʼ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಬೇಸರದ ಎಮೋಜಿಯನ್ನು ಹಾಕಿದ್ದಾರೆ.
ನಟಿ ತ್ರಿಶಾ ಆಗಾಗ್ಗೆ ಮದ್ವೆ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಈ ಹಿಂದೆ ನಟ ಸಿಂಬು ಹಾಗೂ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 2015 ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದು ಸಹ ಶೀಘ್ರದಲ್ಲೇ ರದ್ದಾಯಿತು. ಮದ್ವೆ ಬಳಿಕವೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ನಿಶ್ಚಿತಾರ್ಥದ ಬಳಿಕ ಸಂಬಂಧವನ್ನ ರದ್ದುಗೊಳಿಸಲಾಯ್ತು. ಆದ್ರೆ ಈವರೆಗೆ ನಟಿಯ ಕುಟುಂಬಸ್ಥರು ಮದ್ವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!