ಉದಯವಾಹಿನಿ, ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ತಂಡ ಗೆಲುವಿನ ಸನಿಹದಲ್ಲಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆಗಿ ದೊಡ್ಡ ಅಂತರದ ಹಿನ್ನಡೆಯನ್ನು ಅನುಭವಿಸಿದ್ದ ಪ್ರವಾಸಿ ವಿಂಡೀಸ್‌ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಜಾನ್‌ ಕ್ಯಾಂಪ್‌ಬೆಲ್‌ ಹಾಗೂ ಶೇಯ್‌ ಹೋಪ್‌ ಅವರ ಶತಕಗಳ ಹೊರತಾಗಿಯೂ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಗಿದೆ. ಆ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ ಎರಡನೇ ಪಂದ್ಯವನ್ನೂ ಸುಲಭವಾಗಿ ಗೆದ್ದು ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಎದುರು ನೋಡುತ್ತಿದೆ.

ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 173 ರನ್‌ಗಳಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿದ ವೆಸ್ಟ್‌ ಇಂಡೀಸ್‌ ತಂಡ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ಮೊದಲನೇ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಜಾನ್‌ ಕ್ಯಾಂಪ್‌ಬೆಲ್‌ ಹಾಗೂ ಶೇಯ್‌ ಹೋಪ್‌ ಅವರು ನಾಲ್ಕನೇ ತಮ್ಮ-ತಮ್ಮ ಶತಕಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ವಿಂಡೀಸ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 118.5 ಓವರ್‌ಗಳಿಗೆ 390 ರನ್‌ಗಳಿಗೆ ಆಲ್ಔಟ್‌ ಆಯಿತು. ಆದರೂ ಎದುರಾಳಿ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು. ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಜಸ್‌ಪ್ರೀತ್‌ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್‌ ಸಿರಾಜ್‌ ಎರಡು ವಿಕೆಟ್‌ ಕಿತ್ತರು.

ನಾಲ್ಕನೇ ದಿನ ಕ್ರೀಸ್‌ಗೆ ಆಗಮಿಸಿದ ಜಾನ್‌ ಕ್ಯಾಂಪ್‌ಬೆಲ್‌ ಹಾಗೂ ಶೇಯ್‌ ಹೋಪ್‌ ಜೋಡಿ ಅದ್ಭುತ ಬ್ಯಾಟಿಂಗ್‌ದ ಪ್ರದರ್ಶನವನ್ನು ತೋರಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 177 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ವಿಂಡೀಸ್‌ಗೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಅದ್ಭುತ ಬ್ಯಾಟ್‌ ಮಾಡಿದ ಜಾನ್‌ ಕ್ಯಾಂಪ್‌ ಬೆಲ್‌ 214 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತಿದ್ದ ಶೇಯ್‌ ಹೋಪ್‌ ಕೂಡ ಉತ್ತಮ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 214 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 103 ರನ್‌ಗಳನ್ನು ಗಳಿಸಿದರು. ನಂತರ ಅವರು ಮೊಹಮ್ಮದ್‌ ಸಿರಾಜ್‌ಗೆ ಕ್ಲೀನ್‌ ಬೌಲ್ಡ್‌ ಆದರು.

Leave a Reply

Your email address will not be published. Required fields are marked *

error: Content is protected !!