ಉದಯವಾಹಿನಿ, ಬಳ್ಳಾರಿ: ಡ್ರೈವರ್, ಕಂಡಕ್ಟರ್ ಬೆಂಕಿ ನಂದಿಸುತ್ತಿದ್ದರು, ನಾವು 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡೆವು ಎಂದು ಕರ್ನೂಲ್ ಬಸ್ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕ ಆಕಾಶ್ ಭಯಾನಕ ದೃಶ್ಯವನ್ನು ಬಿಚ್ಚಿಟ್ಟಿದ್ದಾರೆ.
ಮಾತನಾಡಿದ ಅವರು, ನಾನು ಹೈದರಾಬಾದ್‌ನಲ್ಲಿ ಬಸ್ ಹತ್ತಿ, ಬೆಂಗಳೂರಿಗೆ ಹೊರಟಿದ್ದೆವು. ಮಧ್ಯರಾತ್ರಿ 2:35ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಾವೆಲ್ಲ ಮಲಗಿಕೊಂಡಿದ್ದೆವು. ಆಗ ಬೈಕ್ ಡಿಕ್ಕಿ ಹೊಡೆದ ಶಬ್ದವೊಂದು ಕೇಳಿಸಿತು. ಆ ಶಬ್ದಕ್ಕೆ ಪಕ್ಕದಲ್ಲಿದ್ದ ಅಂಕಲ್ ಒಬ್ಬರು ನಮ್ಮನ್ನು ಎಬ್ಬಿಸಿದ್ದರು. ಎದ್ದು ನೋಡಿದಾಗ ಬಸ್ಸಿನ ಎಡಗಡೆ ಭಾಗ ಹಾಗೂ ರಸ್ತೆಯ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಡೀಸೆಲ್ ಚೆಲ್ಲಿತ್ತಾ? ಪೆಟ್ರೋಲ್ ಚೆಲ್ಲಿತ್ತಾ? ಗೊತ್ತಿಲ್ಲ. ನಮಗೆ ಹೊರಬರೋಕೆ ಕೇವಲ 5 ಸೆಕೆಂಡ್ ಮಾತ್ರ ಇತ್ತು. ಆ ಸಮಯದಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರು. ಅವರೇನಾದರೂ ಎಬ್ಬಿಸಿದ್ರೆ ಹೆಚ್ಚಿನ ಜನ ಆಚೆ ಬರಬಹುದಿತ್ತು ಎಂದು ಹೇಳಿದರು.
