ಉದಯವಾಹಿನಿ, ತುಂಬಿದ ಕೆನ್ನೆ, ಕಟ್ಟುಮಸ್ತಾದ ತೋಳು, ಇದು ಜೂ.ಎನ್‌ಟಿಆರ್ ಟ್ರೇಡ್‌ಮಾರ್ಕ್. ಕರಿಯರ್ ಆರಂಭಿಕ ದಿನದಲ್ಲಿ ಭರ್ತಿ 122 ಕೆಜಿ ಇದ್ದ ಜೂ.ಎನ್‌ಟಿಆರ್ ಇದೀಗ ಗುರುತೇ ಸಿಗದಷ್ಟು ಸಣ್ಣಗಾಗಿದ್ದಾರೆ. ಮೂಲಗಳ ಪ್ರಕಾರ ತಿಂಗಳೊಂದರಲ್ಲಿ ಸುಮಾರು 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಬೇರೆ ನಟರಿಗೆ ಹೋಲಿಸಿದರೆ ಜೂ.ಎನ್‌ಟಿಆರ್ ಕೊಂಚ ದಷ್ಟಪುಷ್ಟವಾಗಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವರು. ಆದರೀಗ ಏಕಾಏಕಿ ತಾರಕ್ ಸಿಕ್ಕಾಪಟ್ಟೆ ದೇಹತೂಕ ಇಳಿಸಿಕೊಂಡಿದ್ದಾರೆ.
ಅಂದಹಾಗೆ ಇತ್ತೀಚೆಗೆ ಜೂ.ಎನ್‌ಟಿಆರ್ ಹೈದ್ರಾಬಾದ್‌ನಲ್ಲಿ ಕಾಂತಾರ ಚಿತ್ರದ ಪ್ರಚಾರದ ವೇಳೆ ಕಾಣಿಸಿಕೊಂಡಿದ್ದರು. ಅಂದೇ ಯಂಗ್ ಟೈಗರ್ ಬಾಡಿಯಲ್ಲಿ ಭಾರೀ ಬದಲಾವಣೆ ಕಂಡುಬಂದಿತ್ತು. ಇದೀಗ ಬಾಹುಬಲಿ ಸಿನಿಮಾದ ರೆಕಾರ್ಡ್ ಬಗ್ಗೆ ಸ್ಟಾರ್‌ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ರೀಸೆಂಟ್ ವೀಡಿಯೋವೊಂದರಲ್ಲಿ ಕಾಣಿಸ್ಕೊಂಡ ಯಂಗ್ ಟೈಗರ್ ತೀರಾ ಸಣಕಲಾಗಿದ್ದಾರೆ. ಅಷ್ಟಕ್ಕೂ ಜೂ.ಎನ್‌ಟಿಆರ್ ದೇಹದಲ್ಲಿ ಇಷ್ಟೊಂದು ಬದಲಾವಣೆ ಆಗಲು ಏನು ಕಾರಣ ಎಂಬ ಅನುಮಾನ ಅವರ ಅಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದ ಒಂದು ಶೇಡ್‌ನಲ್ಲಿ ಬರುವ ಪಾತ್ರಕ್ಕಾಗಿ ಜೂ.ಎನ್‌ಟಿಆರ್ ಹೀಗೆ ಬದಲಾಗಿದ್ದಾರೆ ಎಂಬ ಸುದ್ದಿ ಇದೆ. ಬಾಡಿಯನ್ನು ಇಷ್ಟೊಂದು ಪ್ರಯೋಗಕ್ಕೊಳಪಡಿಸಲು ಎನ್‌ಟಿಆರ್ ಯಾಕ್ ಒಪ್ಕೊಂಡ್ರು ಅನ್ನೋದು ಅಭಿಮಾನಿಗಳ ಬೇಸರಕ್ಕೆ ಕಾರಣ.
