ಉದಯವಾಹಿನಿ, ಲಕ್ನೋ: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ ಬಿಟ್ಟು ಉಳಿದವರಿಗೆ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಮಹಿಳೆಯರು ಕಾಮದಾಸೆಗೆ ಬಿದ್ದು ಸಪ್ತಪದಿ ತುಳಿದ ಗಂಡನನ್ನೇ ಕೊಲ್ಲುವ ಹಂತಕ್ಕೆ ತಲುಪುತ್ತಿದ್ದಾರೆ. ಇದಕ್ಕೆ ಮೀರತ್‌ನಲ್ಲಿ ನಡೆದ ಪ್ರಕರಣ ತಾಜಾ ಉದಾಹರಣೆಯಾಗಿದೆ.
ಹೌದು. ಉತ್ತರ ಪ್ರದೇಶದಲ್ಲಿ ಕಾಜಲ್ ಎಂಬ ಮಹಿಳೆ ತನ್ನ ಪ್ರಿಯಕರನಿಗಾಗಿ ಕೈಹಿಡಿದ ಗಂಡನನ್ನೇ ಕೊಂದು ಶವವನ್ನ ಕಾಲುವೆಗೆ ಎಸೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರೋಚಕ ಪ್ರಕರಣವನ್ನ ಭೇದಿಸಿದ ಮೀರತ್‌ನ ರೋಹ್ತಾ ಪೊಲೀಸರು ಆರೋಪಿ ಪತ್ನಿ, ಆಕೆಯ ಪ್ರಿಯಕರ ಹಾಗೂ ಅವನ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ.
