ಉದಯವಾಹಿನಿ, ಶ್ರೀನಗರ: ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ರಕ್ತದೋಕುಳಿ ಹರಿಸಿದ ಉಗ್ರರ ಬಗ್ಗೆ ಹಾಗೂ ಉಗ್ರ ಸಂಘಟನೆಯ ಬಗ್ಗೆ ಮತ್ತಷ್ಟು ಸ್ಫೋಟಕ ರಹಸ್ಯಗಳು ಹೊರಬಿದ್ದಿವೆ. ಹೌದು. ಅಂದು ಬೈಸರನ್‌ ಕಣಿವೆ ತೀರದಲ್ಲಿರುವ ಪಹಲ್ಗಾಮ್‌ಗೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸುವುದಕ್ಕಾಗಿಯೇ AK-47 ಮತ್ತು M4 ಅಸಾಲ್ಟ್ ರೈಫಲ್‌ಗಳನ್ನ ಹೊತ್ತು ದಟ್ಟ ಕಾಡುಗಳ ಮಧ್ಯೆ 22 ಗಂಟೆಗಳ ಕಾಲ ನಡೆದುಕೊಂಡು ಬಂದಿದ್ದರು. ಇದಕ್ಕೆಲ್ಲ ತರಬೇತಿ ನೀಡಿದ್ದು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ನಲ್ಲಿರುವ ʻS1ʼ ಘಟಕ. ಇದಿಷ್ಟೇ ಅಲ್ಲ ಮುಂಬೈ ದಾಳಿಯಿಂದ ಹಿಡಿದು ಪಹಲ್ಗಾಮ್‌ ಭಯೋತ್ಪಾದಕ ದಾಳಿವರೆಗೂ ಭಾರತಕ್ಕೆ ಭಯೋತ್ಪಾದನೆ ರಫ್ತು ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿರೋದು ಈ `S1′ ಘಟಕ ಅನ್ನೋದು ಈಗ ಬೆಳಕಿಗೆ ಬಂದಿದೆ.
S1ʼ ಅಂದ್ರೆ ಸಬ್ವರ್ಷನ್‌-1 ಅಂತ. ಈ ಘಟಕವು ಪಾಕಿಸ್ತಾನದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಪಡೆಗಳ ಹಿಂದೆ ಕಾರ್ಯನಿರ್ವಹಿಸುವ ದೊಡ್ಡ ಜಾಲವಾಗಿದೆ. ಪಾಕಿಸ್ತಾನಿ ಸೇನೆಯ ಕರ್ನಲ್‌ ಇದರ ಮುಖ್ಯಸ್ಥರಾಗಿರುತ್ತಾರೆ. ‘ಗಾಜಿ 1’ ಮತ್ತು ‘ಗಾಜಿ 2’ ಕೋಡ್‌ನಿಂದ ಕರೆಯಲ್ಪಡುವ ಇಬ್ಬರು ರ‍್ಯಾಂಕ್‌ ಆಫೀಸರ್‌ಗಳು ಇದರ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿರುತ್ತಾರೆ. ಇಸ್ಲಾಮಾಬಾದ್‌ನಲ್ಲಿ ಇದರ ಕಚೇರಿ ಇದ್ದು, ಇಲ್ಲಿಂದಲೇ ಶಸ್ತ್ರಾಸ್ತ್ರಗಳು, ಹಣ ಪೂರೈಕೆಯಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

 

Leave a Reply

Your email address will not be published. Required fields are marked *

error: Content is protected !!