ಉದಯವಾಹಿನಿ, ಬೆಂಗಳೂರು: ಭಯೋತ್ಪಾದಕ ಕೃತ್ಯ ಮಾಡ್ತಿರೋರನ್ನು ಆ ಧರ್ಮದವರು ಮೊದಲು ಖಂಡಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.ದೆಹಲಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಭಾರತದ ಮೇಲೆ ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವುದು ಹೊಸದೇನು ಅಲ್ಲ. ಹೊರಗಿನ ಶಕ್ತಿಗಳು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತವೆ. ಭಯೋತ್ಪಾದಕ ಕೃತ್ಯ ಮಾಡ್ತಿರೋರನ್ನು ಆ ಧರ್ಮದವರು ಖಂಡಿಸಬೇಕು, ಪುಲ್ವಾಮಾ ದಾಳಿಯಾದ ಮೇಲೆ ಭಾರತ ಎಚ್ಚೆತ್ತುಕೊಂಡಿದೆ. ಅವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮೋದಿ ಮಾಡಿದ್ದಾರೆ. ಇನ್ನು ಅನೇಕ ನುಸುಳುಕೋರರು ಭಾರತದಲ್ಲಿದ್ದಾರೆ. ಅವರನ್ನು ಹುಡುಕಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಯನ್ನ ಪ್ರತಿಯೊಬ್ಬ ಪ್ರಜೆ ಖಂಡಿಸುತ್ತಾನೆ. ನಾನು ಖಂಡಿಸುತ್ತೇನೆ. ಯಾರು ಕೃತ್ಯಕ್ಕೆ ಕೈ ಜೋಡಿಸಿದ್ದಾರೆ ಅವರನ್ನ ಬಂಧಿಸಬೇಕು. ಶಿಕ್ಷೆ ಕೊಡಿಸಬೇಕು. ಯಾರ ಕೈವಾಡ ಇದೆ ಅವರ ವಿರುದ್ಧವೂ ಕ್ರಮ ಆಗಬೇಕು. ಕರ್ನಾಟಕ ಸರ್ಕಾರ ಹೇಗೆ ನಡೆದುಕೊಳುತ್ತಿದೆ. ಜೈಲಿನಲ್ಲಿ ಇದ್ದರೂ ರಕ್ಷಣೆ ಕೊಡ್ತಿದೆ. ಇಂತಹ ಮನಸ್ಥಿತಿ ಇರೋರು ದೇಶದಲ್ಲಿ ಇರೋದು ಒಳ್ಳೆಯದಲ್ಲ. ಭಯೋತ್ಪಾದಕತೆ ಅನ್ನೋದು ಒಂದು ಧರ್ಮ. ಅದನ್ನ ಹತ್ತಿಕ್ಕೋ ಕೆಲಸ ಮಾಡಬೇಕು ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!