ಉದಯವಾಹಿನಿ, ದಾವಣಗೆರೆ: ಸಚಿವ ಸತೀಶ್ ಜಾರಕಿಹೊಳಿಯವರು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಗಿಡ ನೆಟ್ಟು ಅಗಲಿದ ಸಾಲುಮರದ ತಿಮ್ಮಕ್ಕನಿಗೆ ಸಂತಾಪ ಸೂಚಿಸಿದ್ದಾರೆ.ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಸಚಿವರು ಅಲ್ಲಿಗೆ ಆಗಮಿಸಿದ್ದರು. ಸಭೆಯಲ್ಲಿ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ಹಲವರು ಗಣ್ಯರು ಸಾಲುಮರದ ತಿಮ್ಮಕ್ಕ ಅವರಿಗೆ ಸಂತಾಪ ಸೂಚಿಸಿದರು.
ಬಳಿಕ ಮಾತನಾಡಿದ ಸಚಿವರು, ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆ. ಸದಾ ಪರಿಸರದ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದರು. ಅವರನ್ನು ಪರಿಸರ ಸಂಬಂಧ ಕಾರ್ಯಕ್ರಮ ಇದ್ದರೆ ನೆನಪಿಸಿಕೊಳ್ಳುತ್ತೇವೆ. ಅವರ ಹೆಸರಿನ ಮೇಲೆ ಹೆಚ್ಚು ಕಾರ್ಯಕ್ರಮ ನಡೆಯುತ್ತಿದ್ದವು. ಅವರು ಸದಾ ಪ್ರೇರಣೆಯಾಗಿ ಮುಂದುವರೆಯುತ್ತಿದ್ದರು ಎಂದು ಹೇಳಿದ್ದಾರೆ.ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೆಸ್‍ಗೆ ಪಾಠ, ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದು ಅತ್ಮವಲೋಕನಾ ಮಾಡಿಕೊಳ್ಳಬೇಕಿದೆ. ವೋಟ್ ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತಿದೆ. ಅದಕ್ಕೆ ಚುನಾವಣಾ ಅಯೋಗ ಉತ್ತರ ಕೊಡಬೇಕಿದೆ. ಬಿಹಾರದ ಜನತೆಯ ಮನಸ್ಥಿತಿಗೂ, ಇಲ್ಲಿಯ ಜನರ ಮನಸ್ಥಿತಿಗೂ ಬೇರೆ ಬೇರೆ ಇದೆ. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವ ಇದೆ. ಬಿಹಾರದಲ್ಲಿ ಎಲ್ಲಾರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ. ಬಿಹಾರ ಚುನಾವಣೆ ಫಲಿತಾಂಶ ಗೆದ್ದರು ಚರ್ಚೆಯಾಗಬೇಕು ಸೋತರೂ ಚರ್ಚೆಯಾಗಬೇಕು ಎಂದಿದ್ದಾರೆ.
