ಉದಯವಾಹಿನಿ,ದುಬೈ: ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ ಶೇ. 10ರಷ್ಟು ದಂಡ ವಿಧಿಸಲಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಔಟಾದ ನಂತರ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆದಿದ್ದಕ್ಕಾಗಿ ಬಾಬರ್ ಅಜಂಗೆ ಈ ಶಿಕ್ಷೆ ವಿಧಿಸಲಾಗಿದೆ.
“ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ”ಕ್ಕೆ ಸಂಬಂಧಿಸಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಕೂಡ ಸೇರಿಸಲಾಗಿದೆ ಮತ್ತು ಇದು 24 ತಿಂಗಳಲ್ಲಿ ಬಾಬರ್ ಅವರ ಮೊದಲ ಅಪರಾಧವಾಗಿದೆ” ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 21 ನೇ ಓವರ್‌ನಲ್ಲಿ 212 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುತ್ತಿದ್ದಾಗ ಈ ಘಟನೆ ಸಂಭವಿಸಿತು. ಜೆಫ್ರಿ ವ್ಯಾಂಡರ್ಸೆ ಬಾಬರ್ ಅಜಂ ಅವರನ್ನು 34 ರನ್‌ಗಳಿಗೆ ಔಟ್ ಮಾಡಿದರು. ವೇಳೆ ಹತಾಶರಾದ ಬಾಬರ್ ಕ್ರೀಸ್ ಬಿಡುವ ಮೊದಲು, ತಮ್ಮ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆದರು. ಹೀಗಾಗಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.
