ಉದಯವಾಹಿನಿ, ಮಂಡ್ಯ: ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನ ಹೊಂದಿರುವ ಮಂಡ್ಯ ಜಿಲ್ಲೆ. ಅತಿಹೆಚ್ಚು ಪ್ರವಾಸಿ ತಾಣಗಳನ್ನ ಹೊಂದಿರುವ ಹಿರಿಮೆಗೆ ಪಾತ್ರವಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ತಾಣಗಳನ್ನ ಗುರುತಿಸಿದ್ದು, ಪ್ರವಾಸಿ ತಾಣಗಳ ಪಟ್ಟಿಯಲ್ಲಿ ರಾಜ್ಯದಲ್ಲಿಯೇ ಮಂಡ್ಯ ಅಗ್ರ ಸ್ಥಾನ ಪಡೆದಿದೆ. ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಪ್ರವಾಸಿ ಸ್ಥಳಗಳು ಹಾಗೂ ಪ್ರವಾಸಿಗರ ಭೇಟಿಯ ಅಂಕಿ ಸಂಖ್ಯೆಗಳನ್ನೊಳಗೊಂಡ ಸಂಪೂರ್ಣ ವಿವರ ಹಾಗೂ ಛಾಯಚಿತ್ರಗಳೊಂದಿಗೆ ಪ್ರವಾಸಿ ತಾಣಗಳ ಪಟ್ಟಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆ ಆಯುಕ್ತರು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದರು.
ಪ್ರವಾಸೋದ್ಯಮ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ರಾಜ್ಯದಲ್ಲಿ 1,275 ಪ್ರವಾಸಿ ತಾಣಗಳ ಪಟ್ಟಿ ಮಾಡಿ ಕಳುಹಿಸಿಕೊಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ಸ್ಥಳಗಳನ್ನ ಗುರುತಿಸಲಾಗಿದ್ದು, ಅತಿಹೆಚ್ಚು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮಂಡ್ಯದಲ್ಲಿ ಅಗ್ರ ಸ್ಥಾನ ಪಡೆದರೇ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತೀ ಕಡಿಮೆ ಪ್ರವಾಸಿ ಸ್ಥಳಗಳನ್ನ ಗುರುತು ಮಾಡಿರುವುದು ಕಂಡು ಬಂದಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಸಿದ್ಧ ಪ್ರವಾಸಿ ತಾಣಗಳನ್ನ ಹೊಂದಿದೆ. ಅವು ಸ್ಥಳೀಯರಿಗೆ ಬಿಟ್ಟರೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅವುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನ ಗುರುತಿಸಿ ಅವುಗಳಿಗೆ ಬೂಸ್ಟ್ ನೀಡುವ ಸಲುವಾಗಿ ಹಾಗೂ ಪ್ರವಾಸಿಗರಿಗೆ ಪರಿಚಯಿಸುವ ಮುಖ್ಯ ಉದ್ದೇಶದಿಂದ ಪ್ರವಾಸಿ ಸ್ಥಳಗಳನ್ನು ಗುರಿತಿಸಲಾಗುತ್ತಿದೆ.
