ಉದಯವಾಹಿನಿ : ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ದಂತಕಥೆ ಮತ್ತು ಎರಡು ಬಾರಿ ಐಪಿಎಲ್ ವಿಜೇತ ಆಂಡ್ರೆ ರಸೆಲ್ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ. ಮುಂಬರುವ ಐಪಿಎಲ್ 2026 ಋತುವಿನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ತಂಡದ ಹೊಸ ಪವರ್‌ ಕೋಚ್‌ ಆಗಲಿದ್ದಾರೆ. ಕೋಲ್ಕತ್ತಾ ಮೂಲದ ಫ್ರಾಂಚೈಸಿಯೊಂದಿಗೆ 12 ಋತುಗಳನ್ನು ಕಳೆದ ನಂತರ, ಡಿಸೆಂಬರ್‌ನಲ್ಲಿ ನಡೆದ ಮಿನಿ-ಹರಾಜಿಗೆ ಮುಂಚಿತವಾಗಿ ಕೆಕೆಆರ್ ರಸೆಲ್ ಅವರನ್ನು ಬಿಡುಗಡೆ ಮಾಡಿತು.‌ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರಸೆಲ್ ಮತ್ತೊಂದು ತಂಡದ ಜೆರ್ಸಿಯನ್ನು ಧರಿಸದಿರಲು ನಿರ್ಧರಿಸುವ ಮೂಲಕ ನೈಟ್ ರೈಡರ್ಸ್‌ಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸದಿರುವುದು ಸರಿಯಾದ ನಿರ್ಧಾರ. ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಆದರೆ, ಇತರ ತಂಡಗಳ ಜೆರ್ಸಿಯಲ್ಲಿ ನನ್ನನ್ನು ನಾನು ನೋಡುವುದು ವಿಚಿತ್ರವೆನಿಸಿತು ಎಂದು ರಸೆಲ್‌ ತಿಳಿಸಿದ್ದಾರೆ. ನಮಸ್ಕಾರ ಕೆಕೆಆರ್ ಅಭಿಮಾನಿಗಳೇ. ನಾನು ಐಪಿಎಲ್‌ನಿಂದ ನಿವೃತ್ತಿ ಹೊಂದುವ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಇನ್ನೂ ಪ್ರಪಂಚದಾದ್ಯಂತ ವಿವಿಧ ಲೀಗ್‌ಗಳಲ್ಲಿ ಮತ್ತು ಕೆಕೆಆರ್ ಫ್ರಾಂಚೈಸಿಗಾಗಿ ಸಕ್ರಿಯವಾಗಿ ಆಡುತ್ತೇನೆ. ಸಿಕ್ಸರ್‌ಗಳನ್ನು ಹೊಡೆಯುವುದು, ಪಂದ್ಯಗಳನ್ನು ಗೆಲ್ಲುವುದು, ಎಂವಿಪಿಗಳನ್ನು ಪಡೆಯುವುದು.. ಹೀಗೆ ಐಪಿಎಲ್‌ನಲ್ಲಿ ನನಗೆ ಉತ್ತಮ ನೆನಪುಗಳಿವೆ’ ಎಂದು ವಿದಾದ ಪೋಸ್ಟ್‌ ಹಂಚಿಕೊಂಡಿದ್ದಾರೆ. ಫ್ರಾಂಚೈಸಿಯೊಂದಿಗಿನ ತನ್ನ ಹೊಸ ಪಾತ್ರದ ಕುರಿತು ಕೆಕೆಆರ್ ಜೊತೆ ಮಾತನಾಡಿದ್ದೇನೆ. ಟ್ಯಾಗ್ ಪವರ್ ಕೋಚ್ ತಮಗೆ ಸೂಕ್ತ ಎಂದು ರಸೆಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!