ಉದಯವಾಹಿನಿ, ರಾಮನಗರ: ಶ್ರೀಗಳ ಬಗ್ಗೆ ಹೆಚ್‌ಡಿಕೆ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು. ಹಾಗಿದ್ರೆ ಕುಮಾರಸ್ವಾಮಿಗೆ ಶ್ರೀಗಳ ಆಶೀರ್ವಾದ ಬೇಡವಾ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ಧರ್ಮ ರಕ್ಷಣೆ ಮಾಡಬೇಕು, ರಾಜಕೀಯಕ್ಕೆ ಎಂಟ್ರಿ ಆಗಬಾರದು ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಅವರು, ಇವರು ಸಿಎಂ ಆದಾಗಾ ಶ್ರೀಗಳ ಆಶೀರ್ವಾದ ಇರಲಿಲ್ವಾ? ಕುಮಾರಸ್ವಾಮಿ ಏನು ಸ್ವಯಂ ಘೋಷಿತ ದೇವಮಾನವರಾ ಎಂದು ತಿರುಗೇಟು ನೀಡಿದರು. ನಾನು ರಾಜಕೀಯಕ್ಕೆ ಹೊಸದಾಗಿ ಬಂದ ವೇಳೆ ಚುಂಚನಗಿರಿ ಶ್ರೀಗಳ ನೇತೃತ್ವದಲ್ಲಿ ಚೆನ್ನಾರೆಡ್ಡಿ ಆಯೋಗದ ವಿರುದ್ಧ ಹೋರಾಟ ಆಯ್ತು. ಆ ಹೋರಾಟ ಮಾಡಿದ್ದೇ ದೇವೇಗೌಡರ ಸಿಎಂ ಮಾಡಲು. ಆಗ ದೇವೇಗೌಡರು ಮುಖ್ಯಮಂತ್ರಿಯಾದರು. ಈಗ ಅದೇ ಶ್ರೀಗಳ ಬಗ್ಗೆ ಹೆಚ್‌ಡಿಕೆ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು
