ಉದಯವಾಹಿನಿ, ಯಾದಗಿರಿ: ಹೆರಿಗೆ ವೇಳೆ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಾದಗಿರಿ ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಲೀಲಾವತಿ ಹಾಗೂ ದೇವಪ್ಪ ಚವ್ಹಾಣ ದಂಪತಿಗಳಿಗೆ 10 ವರ್ಷದ ನಂತರ ಮಗುವಿನ ನಿರೀಕ್ಷೆಯಲ್ಲಿದ್ದರು. ಲೀಲಾವತಿಯವರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ (ಡಿ.7) ನಸುಕಿನ ಜಾವ ಸಿಜೇರಿಯನ್ ಮಾಡುವಾಗ ಮಗು ಸಾವನ್ನಪ್ಪಿದೆ.
ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದ್ದೆ ಎಂದು ಲೀಲಾವತಿ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ಶವ ಇಟ್ಟು ಪ್ರತಿಭಟನೆ ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯ ಡಾ.ಶಿವಕುಮಾರ್ ಮಾಹಿತಿ ನೀಡಿದ್ದು, ಗರ್ಭಿಣಿಗೆ ಬಿಪಿ ಹೆಚ್ಚಾಗಿ, ಹೆಚ್ಚು ರಕ್ತಸ್ರಾವವಾಗಿತ್ತು. ನಾವು ತಾಯಿ ಹಾಗೂ ಮಗುವಿನ ಉಳಿಸಲು ಪ್ರಯತ್ನ ಮಾಡಿದ್ದೆವು. ಹೊಟ್ಟೆಯಲ್ಲಿ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದೆ ಎಂದು ಕುಟುಂಬಸ್ಥರ ಆರೋಪವನ್ನು ತಳ್ಳಿ ಹಾಕಿದ್ದಾರೆ.
