ಉದಯವಾಹಿನಿ , ಬೆಳಗಾವಿ: ನವೆಂಬರ್ ಕ್ರಾಂತಿಯ ಬಗ್ಗೆ ಬಾಂಬ್ ಸಿಡಿಸಿದ್ದ ಮಾಜಿ ಸಚಿವ ಕೆಎನ್ ರಾಜಣ್ಣ ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಪರಿಸ್ಥಿತಿ ಉದ್ಭವವಾಗುವುದಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್‌ಬಳಿಕ ಹೈಕಮಾಂಡ್ ಆದೇಶದ ಅನ್ವಯ ಕುರ್ಚಿ ಕಿತ್ತಾಟದ ಹೇಳಿಕೆಗಳು ಬಂದ್ ಆಗಿದ್ದವು. ಆದರೆ ಸಿಎಂ ಪುತ್ರ ಯತೀಂದ್ರ ಹೇಳಿಕೆಯ ನಂತರ ರಾಜಣ್ಣ ಡಿಕೆಶಿ ಮುಖ್ಯಮಂತ್ರಿ ಆಗುವ ಪರಿಸ್ಥಿತಿಯೇ ಉದ್ಭವವಾಗುವುದಿಲ್ಲ ಎಂದು ಖಡಕ್ ಆಗಿಯೇ ತಿಳಿಸಿದ್ದಾರೆ.
ಡಿಕೆಶಿ ಸಿಎಂ ಆದರೆ ನಾನು ಸಂಪುಟ ಸೇರುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಅವರು ಸಿಎಂ ಆದಾಗ ಆ ಪ್ರಶ್ನೆ ಏಳುತ್ತದೆ. ನಾನು ಕಾಂಗ್ರೆಸ್‌ನಲ್ಲೇ ಇದ್ದವನು. ಪಕ್ಷ ನನಗೆ ಏನು ಮಾಡಿಲ್ಲ ಆದರೆ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಯಾರ ಹೆಸರನ್ನು ಉಲ್ಲೇಖಿಸದೇ ದೂರಿದರು. ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ನಾನು ಪಕ್ಷ ಬಿಡುತ್ತೇನೆ ಅಂತ ಯಾರು ಹೇಳಿದ್ದು? ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಅವರ ವೈಯುಕ್ತಿಕ ಹೇಳಿಕೆಯಾಗಿದೆ. ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಹೆದರಿಸುವಂತಹದ್ದು, ಹೈಕಮಾಂಡ್ ಸಿದ್ದರಾಮಯ್ಯನವರನ್ನು ಕೈ ಬಿಡುವುದಾಗಲಿ ಇಲ್ಲ ಎಂದು ಹೇಳಿದರು.
