ಉದಯವಾಹಿನಿ , ಬೆಳಗಾವಿ: ಸಿಎಂ ಹುದ್ದೆಗೆ 500 ಕೋಟಿ ರೂಪಾಯಿ ಕೊಡುವುದಾಗಿದ್ದರೆ ಬೆಳಗಾವಿ ಮತ್ತು ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನವಜೋತ್ ಸಿಂಗ್ ಸಿಧು ಪತ್ನಿಯ 500 ಕೋಟಿ ರೂ. ಆರೋಪಕ್ಕೆ ಪ್ರತಿಕ್ರಿಯಿಸಿದರು.
ನನಗೆ ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವರು ಯಾವ ರಾಜ್ಯದ ಬಗ್ಗೆ ಹೇಳಿದ್ದಾರೆ ಗೊತ್ತಿಲ್ಲ. 500 ಕೋಟಿ ಕಾಲ ಸದ್ಯ ಕಾಂಗ್ರೆಸ್ ನವರಿಗೆ ಇಲ್ಲಾ. ಅದರ ಅರ್ಥ ನಾನು ಕಾಂಗ್ರೆಸ್‌ಗೆ ಕ್ಲೀನ್ ಚಿಟ್ ಕೊಡ್ತಿದ್ದೇನೆ ಅಂತ ಅಲ್ಲ. 500 ಕೋಟಿ ಕೊಡುವುದಾಗಿದ್ದರೆ ಬೆಳಗಾವಿ ಕನಕಪುರದ ಸಾಹುಕಾರ ಸೇರಿ ಬಹಳ ಜನ ಸ್ಪರ್ಧೆಯಲ್ಲಿ ಇರುತಿದ್ದರು ಎಂದು ಡಿಕೆ ಶಿವಕುಮಾರ್, ಸತೀಶ್ ಜಾರಕಿಹೋಳಿಗೆ ಪರೋಕ್ಷವಾಗಿ ಕುಟುಕಿದರು. ಅಲ್ಲದೇ ಬೆಂಗಳೂರಿನಲ್ಲಿ ಬಹಳ ಜನ ಅದಕ್ಕಿಂತ ಹೆಚ್ಚು ಬಿಡ್ ಕೊಟ್ಟು ತಗೊಳ್ಳೋಕ್ಕೆ ರೆಡಿ ಇದಾರೆ ಎಂದರು.
ಅಧಿವೇಶನದ ಕುರಿತು ಮಾತನಾಡಿ, ಜನರ ಬದುಕಿನ ಬಗ್ಗೆ ಚರ್ಚೆ ಮಾಡಬೇಕು ಎಂದು ಚಿಂತನೆ ನಡೆಸಿದ್ದೇವೆ. ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು, ನಮ್ಮ ಆದ್ಯತೆ ಜನರ ಸಮಸ್ಯೆ ಬಗ್ಗೆ ಇದೆ ಎಂದು ಹೇಳಿದರು.
