ಉದಯವಾಹಿನಿ, ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ ಆವರಣದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷವಾಗಿದೆ. ಪೊಲೀಸ್ ಠಾಣೆಯ ಆವರಣದಲ್ಲಿ ಚಿರತೆ ಮರಿ ಓಡಾಡಿದ್ದು ಪೊಲೀಸರು ಕಂಡಿದ್ದು ಕೂಡಲೇ ಪೊಲೀಸರು ಜನರನ್ನ ಕಂಡ ಚಿರತೆ ಭಯದಿಂದ ಪೊಲೀಸ್ ಠಾಣೆಯ ಆವರಣದಲ್ಲೇ ಇದ್ದ ಹಳೆಯ ಕಾರಿನಲ್ಲಿ ಹತ್ತಿ ಅವಿತುಕೊಂಡಿದೆ.
ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಹಾಗೂ ಗುಡಿಬಂಡೆ ಪೊಲೀಸರು ಜಂಟಿಯಾಗಿ ಚಿರತೆ ಮರಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಕಾರಿನ ಸೀಟಿನಡಿ ಚಿರತೆ ಮರಿ ಅವಿತು ಕೂತಿದೆ. ಬಲೆ ಹಾಕಿ ಚಿರತೆ ಮರಿ ಸೆರೆಗೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.
