ಉದಯವಾಹಿನಿ, ಬೆಂಗಳೂರು: ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಸಂಪ್‌ನ ಮುಚ್ಚಳ ಕದ್ದಿದ್ದು, ಈ ಕುರಿತು ರಿಕ್ಕಿ ಅವರು ಎಕ್ಸ್ ಖಾತೆಯಲ್ಲಿ ಬೆಂಗಳೂರಿಗೆ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಸಂಪ್‌ನ ಮುಚ್ಚಳ ಕದಿಯುತ್ತಿರುವ ಸಿಸಿಟಿವಿ ದೃಶ್ಯಗಳನ್ನು ರಿಕ್ಕಿ ಕೇಜ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಝೊಮ್ಯಾಟೋ ಡೆಲಿವರಿ ಬಾಯ್ ಮನೆಯ ಒಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಡಿ.11ರಂದು ಸಂಜೆ 6 ಗಂಟೆಗೆ ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದು, ಆ ಪೈಕಿ ಓರ್ವ ಮನೆಯ ಗೇಟ್ ಒಳಬಂದಿದ್ದಾನೆ. ಕೂಡಲೇ ಸಂಪ್‌ನ ಮೇಲಿರುವ ಕಬ್ಬಿಣದ ಮುಚ್ಚಳವನ್ನು ಎತ್ತಿಕೊಂಡು, ಗೇಟ್‌ನ ಹೊರಗೆ ಹೋಗಿ ಬೈಕ್‌ನಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾರೆ. ಈ ವೇಳೆ ಬೈಕ್ ಮೇಲಿಂದ ಬ್ಯಾಗ್‌ವೊಂದು ಬಿದ್ದಿದ್ದು, ಕೆಂಪು ಬಣ್ಣದ ಫುಡ್ ಡೆಲಿವರಿಗೆ ಬಳಸುವಂತಿದೆ. ಈ ಇಬ್ಬರು ಮೊದಲು ಮನೆಯ ಬಳಿ ಬಂದು ಪರಿಶೀಲನೆ ಮಾಡಿ, ಬಳಿಕ ಕಳ್ಳತನಕ್ಕಿಳಿದಿದ್ದಾರೆ.
