ಉದಯವಾಹಿನಿ, ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ರಸ್ತೆ ವಿಚಾರವಾಗಿ ಪರ ವಿರೋಧದ ಚರ್ಚೆ ಆರಂಭವಾಗಿದೆ. ಕಾಮಗಾರಿಗೆ ಬಡವರ ಮನೆ ಒಡೆದು, ಪ್ರಭಾವಿಗಳ ಮನೆ ಕೈಬಿಡಲಾಗಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದ್ದಾರೆ.ರಾಜಕೀಯ ಪ್ರಭಾವ ಇರುವವರ ಕೆಲವು ಅಂಗಡಿಗಳು, ಮನೆಗಳನ್ನು ಹಾಗೆ ಬಿಡಲಾಗಿದೆ. ಬಡವರ ಅಂಗಡಿ ಮುಂಗಟ್ಟು, ಮನೆ ಒಡೆಯಲಾಗಿದೆ. ಸರಿಯಾದ ಯೋಜನೆ ಪ್ರಕಾರ ಕಾಮಗಾರಿ ನೆಡೆಯುತ್ತಿಲ್ಲ. ಹೊನ್ನಾಳಿ ಅಂದ ಹೆಚ್ಚಿಸಲು ರಸ್ತೆ ಅಗಲಿಕರಣಕ್ಕೆ ಕೆಶಿಪ್ ಕಾಮಗಾರಿ ಮಹತ್ವದ್ದು. ಸರಿಯಾಗಿ ರಸ್ತೆ ಅಗಲೀಕರಣ ಮಾಡದೇ ಹಾಗೆ ಬಿಡಲಾಗ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.ರಸ್ತೆಗೆ ಗುರುತಿಸಿದ ಎಲ್ಲಾ ಕಟ್ಟಡ ಒಡೆದು ಕಾಮಗಾರಿ ಮಾಡಬೇಕು. ಬಡವರಿಗೆ ಒಂದು ರೀತಿ, ಪ್ರಭಾವಿಗಳಿಗೆ ಒಂದು ರೀತಿ ಮಾಡಬಾರದು ಎಂದು ಸ್ಥಳಿಯರು ಹಾಗೂ ರೇಣುಕಾಚಾರ್ಯ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
