ಉದಯವಾಹಿನಿ, ಅಬುಧಾಬಿ: ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್‌ ಮತ್ತು ಮಧ್ಯಮ ವೇಗಿ ಬೌಲರ್‌ ವೆಂಕಟೇಶ್‌ ಅಯ್ಯರ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 7 ಕೋಟಿ ರೂ. ನೀಡಿ ಖರೀದಿಸಿದೆ.ಕಳೆದ ವರ್ಷ ಕೋಲ್ಕತ್ತಾ (KKR) 23.75 ಕೋಟಿ ರೂ. ನೀಡಿ ಅಯ್ಯರ್‌ ಅವರನ್ನು ಖರೀದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಯ್ಯರ್‌ ಬಿಡ್‌ ಮೌಲ್ಯ 70% ಕಡಿಮೆಯಾಗಿದೆ. 2021 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿರುವ ಅಯ್ಯರ್‌ ಒಟ್ಟು 62 ಪಂದ್ಯಗಳಿಂದ 137.32 ಸ್ಟ್ರೈಕ್‌ ರೇಟ್‌ನಲ್ಲಿ 1468 ರನ್‌ ಹೊಡೆದಿದ್ದಾರೆ. ಒಂದು ಶತಕ ಮತ್ತು 12 ಅರ್ಧಶತಕ ಬಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!