ಉದಯವಾಹಿನಿ, ನ್ಯಾಷನಲ್ ಟಿ20 ಕಪ್ ಟೂರ್ನಿಯಲ್ಲಿ ಲಾಹೋರ್ ಹಾಗೂ ಕರಾಚಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಾಚಿ ವೇಗಿ ಅಸಾದ್ ಅಖ‌ರ್ ಎಸೆದ ನೋ ಬಾಲ್ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಪೇಶಾವ‌ರ್ ಅರ್ಬಾಬ್ ನಿಯಾಜ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಸಾದ್ ಕ್ರೀಸ್ನಿಂದ ಸರಾಸರಿ ಒಂದು ಅಡಿ ಮುಂದೆ ಕಾಲಿಟ್ಟು ನೋ ಬಾಲ್ ಎಸೆದಿದ್ದು, ಸ್ಪಾಟ್ ಫಿಕ್ಸಿಂಗ್ ಅನುಮಾನ ಹುಟ್ಟಿಸಿದೆ.

ಈ ಪಂದ್ಯದಲ್ಲಿ ಅಸಾದ್ ಕೇವಲ ಒಂದು ಓವರ್ ಬೌಲಿಂಗ್ ಮಾಡಿದಾಗ 21 ರನ್ ಗಳುನ್ನು ನೀಡಿದ್ದರು. ಅದರಲ್ಲಿ ಎರಡು ನೋ ಬಾಲ್ ಮತ್ತು ಎರಡು ವೈಡ್ ಗಳು ಸೇರಿದ್ದು ಕೆಲವು ಅಭಿಮಾನಿಗಳು ಇದನ್ನು ಉದ್ದೇಶಪೂರ್ವಕವಾಗಿ ಎಸೆದಿರುವ ಸಾಧ್ಯತೆಯಾಗಿ ಕಂಡಿದ್ದಾರೆ. ಈ ನೋ ಬಾಲ್ ಗಳನ್ನು 2010 ರಲ್ಲಿ ಮೊಹಮ್ಮದ್ ಅಮಿರ್ ಸ್ಪಾಟ್ ಫಿಕ್ಸಿಂಗ್ ಆರೋಪ ಹೊಂದಿದ್ದನೋ ಬಾಲ್ ಗೆ ಹೋಲಿಸಲಾಗಿದೆ.
ಪರಿಣಾಮವಾಗಿ, ಕರಾಚಿ ತಂಡವು ಮೊದಲು ಬ್ಯಾಟ್ ಮಾಡಿ 206 ರನ್ಗಳಿಸಿ, ಲಾಹೋರ್ ತಂಡವನ್ನು 149 ರಸ್ತೆ ಆಲೌಟ್ ಮಾಡಿ 57 ರನ್ಗಳಿಂದ ಗೆದ್ದಿತು. ಅಸಾಗ್ನಿ ನೋ ಬಾಲ್ ವಿವಾದದಿಂದಾಗಿ ಪಂದ್ಯ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ..

Leave a Reply

Your email address will not be published. Required fields are marked *

error: Content is protected !!