ಉದಯವಾಹಿನಿ, ಗಾಂಧಿನಗರ: 46,000 ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಕೆಲವೇ ಗಂಟೆಗಳಲ್ಲಿ ಆಗಮಿಸಲಿದೆ. ಇದರಿಂದ ಭಾರತದಲ್ಲಿ ತಲೆದೂರಿರುವ ಅಡುಗೆ ಅನಿಲದ ಕೊರತೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ.
ಶಿವಾಲಿಕ್ ಹಡಗು 46,000 ಟನ್ ಎಲ್‌ಪಿಜಿ ಹೊತ್ತು ಭಾರತಕ್ಕೆ ಬಂದಿತ್ತು. ಎರಡೂ ಹಡಗುಗಳು ಸರ್ಕಾರಿ ಸ್ವಾಮ್ಯದ ಶಿಪ್ಪಿಂಗ್ ಕಾರ್ಪೋರೇಷನ್‌ ಆಫ್ ಇಂಡಿಯಾ ಒಡೆತನದಲ್ಲಿವೆ. ಎರಡು ಹಡಗುಗಳು ತಲಾ 46,000 ಟನ್‌ ಎಲ್‌ಪಿಜಿ ಹೊತ್ತು ತಂದಿವೆ. ಇದರೊಂದಿಗೆ ಮೂರನೇ ಹಡಗು ಸಹ ಇಂದು (ಮಾ.17) ಭಾರತಕ್ಕೆ ಬಂದು ತಲುಪುವ ಸಾಧ್ಯತೆ ಇದೆ. ಯುಎಇಯ ಫುಜೈರಾ ಬಂದರಿನಿಂದ ಹೊರಟಿದ್ದ ಕಚ್ಚಾ ತೈಲ ಟ್ಯಾಂಕರ್ ಜಗ್ ಲಡ್ಕಿ ಇಂದು ಮಧ್ಯಾಹ್ನ ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಡಗು ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತು ತರುತ್ತಿದೆ.

Leave a Reply

Your email address will not be published. Required fields are marked *

error: Content is protected !!