ಉದಯವಾಹಿನಿ : ಸು ಫ್ರಮ್ ಸೋ’ ಮತ್ತು 45 ಸಿನಿಮಾ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್‌ಲಾರ್ಡ್‌ ಇನ್ನೇನೂ ಮುಂದಿನ ಜನವರಿಗೆ ಬಿಡುಗಡೆಯಾಗ್ತಿದೆ. ಹೌದು, ಇದೀಗ ರಾಜ್ ನಟನೆಯ ಬಹುನಿರೀಕ್ಷಿತ ರಕ್ಕಸಪುರದೊಳ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಜೋಗಿ ಪ್ರೇಮ್ ಅಪ್ಪಟ ಶಿಷ್ಯಾ ಬಹುಕಾಲದ ಆಪ್ತ ಸಾಕಷ್ಟು ಕಾಲ ಕೆಲಸ ಮಾಡಿರುವ ರವಿ ಸಾರಂಗ ಆಕ್ಷನ್ ಕಟ್ ಹೇಳ್ತಿದ್ದಾರೆ. ಕೊಳ್ಳೇಗಾಲವನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಸ್ಟೋರಿ ಆಗಿದ್ರು, ಇದು ಒಬ್ಬ ವ್ಯಕ್ತಿಯ ಒಳಗಿನ ದೈತ್ಯನ ಬಗ್ಗೆ ಒಂದು ಕಥೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳಿರತ್ತೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು, ಆ ಕತ್ತಲೆಯೇ ರಕ್ಕಸನ ಮುಖ್ಯ ಪಾತ್ರವು ತನ್ನ ಆಂತರಿಕ ಹೋರಾಟಗಳನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಈ ಚಿತ್ರವು ಹೇಳುತ್ತದೆ.

ಪ್ರಕೃತಿ ಮಡಿಲಲ್ಲಿರೋ ಊರಿನ ಮೂಲಕ ಟೀಸರ್ ಸ್ಟಾರ್ಟ್ ಆಗುತ್ತೆ. ಆನಂತರ ಸಾವು ನೋವು ಮಾಟ ಮಂತ್ರದ ಕತೆ ಹೇಳ್ತಿರೋ ರೀತಿ ಭಾಸವಾಗುತ್ತೆ. ಅಲ್ಲಿಗೆ ರಾಜ್ ಇವಿಲ್ ಐ ಮೂಲಕ ಪಾತ್ರದ ಪರಿಚಯ ಮಾಡ್ತಾರೆ. ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಆದರೆ, ಸಾಮಾನ್ಯವಾಗಿ ಚಿತ್ರಗಳಲ್ಲಿ ಕಂಡುಬರುವ ರೀತಿಯ ಪಾತ್ರವಿರೋದಿಲ್ಲ. ಮೊದಲು ಬರೋ ಪಾತ್ರವಲ್ಲ ತನ್ನೊಳಗಿನ ದೈತ್ಯನನ್ನು ಎದುರಿಸಿದಾಗ, ಮುಂದೆ ಏನಾಗುತ್ತದೆ ಎಂಬುದು ಕಥೆ. ಇದು ವಾಸ್ತವಿಕ ಪಾತ್ರವಾಗಿದ್ದು, ಅದರ ಪ್ರಯಾಣವು ನೋವು, ಹುಡುಕಾಟ ಮತ್ತು ನಿರಾಳತೆಯ ಕ್ಷಣಗಳೊಂದಿಗೆ ಕಥಾವಸ್ತು ಹೊಂದಿದೆ. ರಕ್ಕಸಪುರದೊಳ್ ಬಿಡುಗಡೆಗೆ ರೆಡಿಯಾಗಿದ್ದು, ಬಹುನಿರೀಕ್ಷಿತ ಚಿತ್ರ 2026 ಫೆಬ್ರವರಿ 6ಕ್ಕೆ ತೆರೆಮೇಲೆ ಬರಲು ಸಜ್ಜಾಗಿದೆ.

 

Leave a Reply

Your email address will not be published. Required fields are marked *

error: Content is protected !!