ಉದಯವಾಹಿನಿ, ವರ್ಜೀನಿಯಾ : ನಿಯಂತ್ರಣ ತಪ್ಪಿ ರಸ್ತೆಯಿಂದ ಸಮುದ್ರಕ್ಕೆ ಕಾರು ಬಿದ್ದಿತ್ತು. ಇನ್ನೇನು ಕಾರು ಮುಳುಗುವುದರಲ್ಲಿತ್ತು, ಅಷ್ಟರೊಳಗೆ ಅಲ್ಲಿದ್ದ ಜನ ಕೂಡಲೇ ನೀರಿಗೆ ಹಾರಿ ಇನ್ನೇನು ಕಾರು ಮುಳುಗುತ್ತಿದೆ ಎನ್ನುವಷ್ಟರಲ್ಲಿ ಕಾರಿನ ಗಾಜು ಒಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಘಟನೆ ವರ್ಜೀನಿಯಾದಲ್ಲಿ ನಡೆದಿದೆ. ಅಲ್ಲಿದ್ದವರ್ಯಾರು ಕೂಡ ಆಕೆಗೆ ಪರಿಚಿತರಲ್ಲ, ಹಾಗೆಂದ ಮಾತ್ರಕ್ಕೆ ಕಾರಿನ ವಿಡಿಯೋ ಮಾಡುತ್ತಲೂ ನಿಂತಿರಲಿಲ್ಲ. ಕೂಡಲೇ ಆಕೆಯನ್ನು ರಕ್ಷಿಸುವುದು ಮೊದ ಕರ್ತವ್ಯವೆಂದು ಅರಿತು ನೀರಿಗೆ ಹಾರಿದ್ದರು. ನೋಡನೋಡುತ್ತಲೇ ಕಾರು ಮುಳುಗಿತ್ತು. ಕೂಡಲೇ ಗಾಜನ್ನು ಒಡೆದು ಮಹಿಳೆಯನ್ನು ಕಾಪಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!