ಉದಯವಾಹಿನಿ, ಚೀನಾ : ಪತ್ನಿ ತನ್ನ ಒಪ್ಪಿಗೆ ಇಲ್ಲದೆ ಪಾತ್ರೆ ತೊಳೆಯುವ ಸಾಧನ ಡಿಶ್‌ವಾಶರ್ ತಂದಿದ್ದಕ್ಕೆ ಕೋಪಗೊಂಡ ಪತಿ ಇಡೀ ಮನೆಯಲ್ಲಿರುವ ಪೀಠೋಪಕರಣ, ವಸ್ತುಗಳನ್ನು ಒಡೆದುಹಾಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತನಗೆ ಗೊತ್ತಿಲ್ಲದೆ 25 ಸಾವಿರ ರೂ. ಮೌಲ್ಯದ ಡಿಶ್‌ವಾಶರ್ ಖರೀದಿಸಿದ್ದಕ್ಕೆ ಕೋಪಗೊಂಡು ಆತ ಕೆಟ್ಟದಾಗಿ ನಡೆದುಕೊಂಡಿದ್ದಾನೆ.
ಮನೆಯಲ್ಲಿ ಯಾವ ಕೆಲಸಕ್ಕೂ ಪತಿ ಸಹಾಯ ಮಾಡುತ್ತಿರಲಿಲ್ಲ, ಹೀಗಾಗಿ ತನಗೇನು ಮಾಡಬೇಕೆಂದು ತೋಚದೆ, ಸ್ವಲ್ಪ ಕೆಲಸ ಕಡಿಮೆಯಾಗಲಿ ಎಂದು ಈ ಯಂತ್ರವನ್ನು ಖರೀದಿಸಿದ್ದಾಗಿ ಪತ್ನಿ ಹೇಳಿದ್ದಾರೆ. ಪತಿ ತನ್ನ ಹೆಂಡತಿಗೆ ಆರ್ಡರ್ ರದ್ದುಗೊಳಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಆದೇಶಿಸಿದಾಗ, ಆಕೆ ನಿರಾಕರಿಸಿದ್ದಾರೆ ಅದಕ್ಕೆ ಕೋಪಗೊಂಡ ಪತಿ ಲಿವಿಂಗ್ ರೂಮಿನಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಒಡೆದುಹಾಕಿದ್ದಾನೆ.
ಧ್ವಂಸಗೊಂಡ ಕೋಣೆಯ ವಿಡಿಯೋವನ್ನು ಕೂಡ ಮಾಡಲಾಗಿತ್ತು. ಅವರು ನನಗೆ ಡಿಶ್‌ವಾಶರ್ ಖರೀದಿಸಲು ಏಕೆ ಅನುಮತಿಸುವುದಿಲ್ಲ ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾನು ತಪ್ಪು ಮಾಡಿದ್ದೇನೆಂದು ನನಗೆ ಅನಿಸುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಘಟನೆಯ ನಂತರ, ಪತ್ನ ಅಳುತ್ತಾ ಮನೆಯಿಂದ ಓಡಿಹೋಗಿದ್ದಾರೆ.ಬೀದಿಯಲ್ಲಿ ಗಂಟೆಗಟ್ಟಲೆ ಅಲೆದಾಡಿ ಬಳಿಕ ಹೋಟೆಲ್ಗೆ ಹೋಗಿ ಉಳಿದುಕೊಂಡಿದ್ದರು. ಪತಿ ಮನೆಯಿಂದ ದೂರ ಕೆಲಸ ಮಾಡುತ್ತಾರೆ, ತಿಂಗಳಿಗೆ 11,000 ಯುವಾನ್ ( 144,844ರೂ.) ಸಂಪಾದಿಸುತ್ತಾರೆ, ಆದರೆ ಹೆಂಡತಿ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಾಳೆ.ಕಳೆದ ವರ್ಷ ತನ್ನ ಅನಾರೋಗ್ಯ ಮತ್ತು ಕೆಲಸ ಮಾಡಲು ಸಾಧ್ಯವಾಗದ ಕಾರಣ ಆಕೆಯ ಮೇಲೆ ಕೋಪ ಹುಟ್ಟಿಕೊಂಡಿದೆ ಎಂಬುದು ಆಕೆಯ ಮಾತು. ಅವರು ಸಾಲದಲ್ಲಿ ಸಿಲುಕಿರುವ ಕಾರಣ ಡಿಶ್‌ವಾಶರ್ ಹಿಂದಿರುಗಿಸಿದ್ದಾರೆ ಎಂದು ಆಕೆ ಹೇಳಿದ್ದಾರೆ. ಮರುದಿನವೇ ಆಕೆಯ ಪತಿ ಪತ್ನಿಗೆ ಕರೆ ಮಾಡಿ ಕ್ಷಮಿಸು, ಅಂದು ನನ್ನ ಮನಸ್ಥಿತಿ ಕೆಟ್ಟದಾಗಿತ್ತು ಆ ರೀತಿ ನಾನು ನಡೆದುಕೊಳ್ಳಬಾರದಿತ್ತು, ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ , ನಾವು ಚಿಕ್ಕ ಡಿಶ್‌ವಾಶರ್ ಖರೀದಿಸೋಣ ಮನೆಗೆ ಬಾ ಎಂದು ಕೇಳಿದ್ದಾನೆ. ಆಗ ಈ ಕತೆ ಸುಖಾಂತ್ಯಗೊಂಡಿದೆ.
