ಉದಯವಾಹಿನಿ , ಬೆಂಗಳೂರು: ಬಿಎಂಟಿಸಿ ಬಸ್ ರಿವರ್ಸ್ ತೆಗೆಯುವಾಗ ರೈಲಿಗೆ ಗುದ್ದಿದ ಘಟನೆ ಸಾದರಮಂಗಲ ಬಳಿ ನಡೆದಿದೆ. ರೈಲಿಗೆ ಗುದ್ದಿದ ಪರಿಣಾಮ ಬಸ್‌ನ ಹಿಂಭಾಗ ಜಖಂಗೊಂಡಿದೆ. ಘಟಕ 51ರ ಬಿಎಂಟಿಸಿ ಬಸ್ ರೈಲ್ವೆ ಪ್ಯಾರಲಲ್ ಬಳಿ ರಿವರ್ಸ್ ತೆಗೆಯುವಾಗ ರೈಲಿಗೆ ಡಿಕ್ಕಿಯಾಗಿದೆ. ಬಸ್ ಘಟಕದಿಂದ ಕಾಡುಗೋಡಿ ನಿಲ್ದಾಣಕ್ಕೆ ತೆರಳುತ್ತಿತ್ತು. ವಾಹನದಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಚಾಲಕನ ಅಜಾಗರುಕತೆಯಿಂದ ಈ ಅನಾಹುತ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ
