ಉದಯವಾಹಿನಿ , ಚಿತ್ರದುರ್ಗ:  ಭಾರತದ 77ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಜಿಲ್ಲಾ ಆಯುಷ್ ಕಛೇರಿ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಸೋಮವಾರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾ ಕೇಂದ್ರವಾದ ಚಿತ್ರದುರ್ಗದ ಕೆಎಸ್ಆರಟಿಸಿ ಡಿಪೋ ರಸ್ತೆಯ ಜಿಲ್ಲಾ ಆಯುಷ್ ಕಛೇರಿ ಆವರಣದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಧ್ವಜಾರೋಹಣ ನೆರವೇರಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಅವರು ಭಾರತ ಇಂದು 77ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದು ಈ ಶುಭಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ಆಯುಷ್ ಇಲಾಖೆಯ ಮಹತ್ತರ ಕೊಡುಗೆಗಳಲ್ಲಿ ಒಂದಾದ ವಿಧ್ಯಾರ್ಥಿಚೇತನ ಯೋಜನೆಯ ಮೂಲಕ ವಿಧ್ಯಾರ್ಥಿಗಳ ಆರೋಗ್ಯ ಸುಧಾರಣೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಮುರಾರ್ಜಿದೇಸಾಯಿ ವಸತಿ ಶಾಲೆ ಹಾಗೂ ಇನ್ನಿತರ ಶಾಲಾ ಕಾಲೇಜು ವಿಧ್ಯಾರ್ಥಿಗಳ ಆರೋಗ್ಯ ಸುಧಾರಣೆ ಹಾಗೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳ ಮೂಲಕ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಸಂಧಿವಾತ ಮಧುಮೇಹ ದಂತಹ ರೋಗಗಳ ಸುಧಾರಣೆಯಲ್ಲಿ ಮಹತ್ತರ ಸಾಧನೆ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಘಟಕದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ಕೆರೂರ್ ಜಿಲ್ಲಾ ಆಯುಷ್ ಚಿಕಿತ್ಸಾಲಯದ ಡಾ.ದೇವರಾಜ್ ಸುರಹೊನ್ನಿ, ಡಾ.ಅನುಪಮ, ಸಿಬ್ಬಂದಿಗಳಾದ ವಿಶ್ವನಾಥ್, ವಿನಯ್ ಕುಮಾರ್, ಫರ್ಜಾನಬೇಗಂ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಹಿರಿಯೂರು: ಜಿಲ್ಲೆಯ ಹಿರಿಯೂರು ತಾಲ್ಲೂಕು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆವರಣದಲ್ಲಿ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಟಿ. ಧ್ವಜಾರೋಹಣ ನೆರವೇರಿಸಿದರು. ಡಾ.ರಾಘವೇಂದ್ರ, ಡಾ.ಚಂಪಾ, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಜೆ.ಎನ್.ಕೋಟೆ: ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆವರಣದಲ್ಲಿ ವೈದ್ಯಾಧಿಕಾರಿ ಶ್ರೀಮತಿ ಡಾ.ವಿಜಯಲಕ್ಷ್ಮೀ ಧ್ವಜಾರೋಹಣ ನೆರವೇರಿಸಿದರು ಯೋಗ ಚಿಕಿತ್ಸಕ ರವಿ ಕೆ.ಅಂಬೇಕರ್, ಸಿಬ್ಬಂದಿ ಮಂಜುಳಾದೇವಿ, ಪಶು ಚಿಕಿತ್ಸಕಿ ಅನ್ನಪೂರ್ಣ ಗ್ರಾಮದ ಮುಖಂಡ ಅರುಣ್ ಕುಮಾರ್, ದೈಹಿಕ ಶಿಕ್ಷಕ ನಾಗೇಶ್ ಇನ್ನಿತರರು ಉಪಸ್ಥಿತರಿದ್ದರು.
ಸೊಂಡೆಕೆರೆ: ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಾಂತಬಾಬು ಧ್ವಜಾರೋಹಣ ನೆರವೇರಿಸಿದರು. ಚಿಕಿತ್ಸಾಲಯದ ಸಿಬ್ಬಂದಿ ಶ್ರೀಮತಿ ಶಾರದ ಹೆಂಜಾರಪ್ಪ, ಯೋಗ ತರಬೇತುದಾರರಾದ ಅಪೂರ್ವ, ಜ್ಯೋತಿ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ನನ್ನಿವಾಳ: ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದ ಸರ್ಕಾರಿ ಆಯುಷ್ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವಮ್ಮರಾಜಣ್ಣ ಧ್ವಜಾರೋಹಣ ನೆರವೇರಿಸಿದರು ಆಯುಷ್ ವೈದ್ಯಾಧಿಕಾರಿ ಡಾ.ಪ್ರಭು ಯೋಗ ತರಬೇತುದಾರರಾದ ವೆಂಕಟಮ್ಮ,  ಬಿಂಧುಮಾದವ್ ಉಪಸ್ಥಿತರಿದ್ದರು. ಹಾಗೂ ಆಯುಷ್ ಇಲಾಖೆಯ ಹೆಬ್ಬಳ್ಳಿ, ಆಲಘಟ್ಟ, ಹಿರೇಹಳ್ಳಿ, ಓಬಳಾಪುರ ಸೇರಿದಂತೆ ಇನ್ನೂ ಹಲವು ಆಯುಷ್ ಕೇಂದ್ರಗಳಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!