ಉದಯವಾಹಿನಿ , ಉಡುಪಿ: ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ಬೋಟ್ ಸಮುದ್ರಕ್ಕೆ ಮಗುಚಿದ ಘಟನೆ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ನಡೆದಿದೆ.
ಟೂರಿಸ್ಟ್ ಬೋಟಿನಲ್ಲಿ 15 ಮಂದಿ ಪ್ರವಾಸಿಗರು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಬೋಟ್ ಮಗುಚಿದೆ. ಪರಿಣಾಮ ಎಲ್ಲಾ ಪ್ರವಾಸಿಗರು ಸಮುದ್ರಕ್ಕೆ ಬಿದ್ದಿದ್ದು, ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಜಾಕೆಟ್ ಧರಿಸದೇ ಬೋಟ್‍ನಲ್ಲಿ ಹೋಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ನೀರುಪಾಲಾದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರಿಗೆ ಮಲ್ಪೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
