ಉದಯವಾಹಿನಿ, ಸಾಮಾನ್ಯವಾಗಿ ಇಡ್ಲಿಗಳನ್ನು ತಯಾರಿಸಲು ಹಿಂದಿನ ದಿನ ಬೇಳೆಯನ್ನು ನೆನೆಸಿಟ್ಟು ಸರಿಯಾಗಿ ರುಬ್ಬಿಕೊಳ್ಳಬೇಕಾಗುತ್ತದೆ. ಇವುಗಳನ್ನು ರಾತ್ರಿಯಿಡೀ ಹುದುಗಿಸಿ ಮರುದಿನ ಬೆಳಗ್ಗೆ ಇಡ್ಲಿ ತಯಾರಿಸಬಹುದು. ಕೆಲವೊಮ್ಮೆ ನಿಮಗೆ ಅಷ್ಟು ಸಮಯ ಇರುವುದಿಲ್ಲ. ಈ ಸಮಯದಲ್ಲಿ ಇಡ್ಲಿಗಳನ್ನು ಹೇಗೆ ತಯಾರಿಸಬೇಕೆಂದು ಆಶ್ಚರ್ಯ ವ್ಯಕ್ತಪಡಿಸುತ್ತೀರಿ. ನಿಮಗಾಗಿಯೇ ಇಲ್ಲಿ ಉಲ್ಲೇಖಿಸಿದಂತೆ ಜೋಳದ ಹಿಟ್ಟು ಹಾಗೂ ಬಾಂಬೆ ರವೆಯೊಂದಿಗೆ ತಕ್ಷಣಕ್ಕೆ ಇಡ್ಲಿಗಳನ್ನು ತಯಾರಿಸಬಹುದು.
ನಾವು ತಿಳಿಸುವ ವಿಧಾನಗಳನ್ನು ಅನುಸರಿಸಿದರೆ, ಇಡ್ಲಿಗಳು ತುಂಬಾ ಮೃದು, ರುಚಿಕರವಾಗಿರುತ್ತವೆ. ಇವುಗಳನ್ನು ತಯಾರಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಇಡ್ಲಿಗಳನ್ನು ಕೆಲವೇ ನಿಮಿಷಗಳಲ್ಲಿ ಬಿಸಿಯಾಗಿ ತಯಾರಿಸಬಹುದು. ಮೊದಲ ಬಾರಿಗೆ ಈ ಟಿಪ್ಸ್ ಅನುಸರಿಸಿ ಇಡ್ಲಿಗಳನ್ನು ಸರಳವಾಗಿ ಮಾಡಬಹುದು. ಕಿರಿಯರಿಂದ ಹಿರಿಯವರು ಯಾವುದೇ ಚಟ್ನಿಯ ಜೊತೆಗೆ ಈ ಇಡ್ಲಿಗಳನ್ನು ಸೇವಿಸಿದರೂ ಸಖತ್ ರುಚಿಯು ಲಭಿಸುತ್ತದೆ. ತುಂಬಾ ರುಚಿಕರವಾದ ಜೋಳದ ಇಡ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಜೋಳ ಹಿಟ್ಟು – ಒಂದು ಕಪ್
ಬಾಂಬೆ ರವೆ – ಅರ್ಧ ಕಪ್
ಬೇಕಿಂಗ್ ಸೋಡಾ – ಕಾಲು ಟೀಸ್ಪೂನ್
ಮೊಸರು – ಒಂದು ಕಪ್
ತುಪ್ಪ – ಸಾಕಷ್ಟು
ಉಪ್ಪು – ಸಾಕಷ್ಟು
ಜೋಳದ ಹಿಟ್ಟಿನೊಂದಿಗೆ ತುಂಬಾ ರುಚಿಕರವಾದ ಇಡ್ಲಿ ತಯಾರಿಸಲು ಮೊದಲಿಗೆ, ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಒಂದು ಕಪ್ ಜೋಳದ ಹಿಟ್ಟು, ಒಂದು ಕಪ್ ಮೊಸರು ಸೇರಿಸಿ. ಬಳಿಕ ಅರ್ಧ ಕಪ್ ಬಾಂಬೆ ರವೆ, ಅರ್ಧ ಕಪ್ ನೀರು ಸೇರಿಸಿ ಮಿಶ್ರಣ ಮಾಡಿ. ಹಿಟ್ಟನ್ನು ಇಡ್ಲಿ ಹಿಟ್ಟಿನಂತೆ ನಯವಾದ ತನಕ ಮಿಶ್ರಣ ಮಾಡಿ, ನಂತರ ಮುಚ್ಚಿ 15 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.
ಹದಿನೈದು ನಿಮಿಷಗಳ ಬಳಿಕ, ಹಿಟ್ಟನ್ನು ಮತ್ತೆ ಮಿಶ್ರಣ ಮಾಡಿ. ಬಳಿಕ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅಡುಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ. ಈಗ ಒಲೆ ಆನ್ ಮಾಡಿ ಇಡ್ಲಿ ಪಾತ್ರೆಯಲ್ಲಿ ಸಾಕಷ್ಟು ನೀರು ಸುರಿದು ಕುದಿಯಲು ಬಿಡಿ. ಈ ಮಧ್ಯೆ ಇಡ್ಲಿ ತಟ್ಟೆಗಳಿಗೆ ಸ್ವಲ್ಪ ತುಪ್ಪ ಹಚ್ಚಿ ಹಿಟ್ಟನ್ನು ಸುರಿಯಿರಿ.
