ಉದಯವಾಹಿನಿ, ಹಲವು ಜನರು ಬೆಳಗಿನ ಉಪಹಾರದಲ್ಲಿ ದೋಸೆ ಸೇವಿಸಲು ಹೆಚ್ಚು ಇಷ್ಟಪಡುತ್ತಾರೆ. ತಂಪಾದ ವಾತಾವರಣ ಇದ್ದಾಗ ಬೆಳಗ್ಗೆ ಬಿಸಿ ಬಿಸಿಯಾದ ದೋಸೆ ಸೇವಿಸುವುದು ಕೂಡ ಮನಸಿಗೆ ಖುಷಿ ನೀಡುತ್ತದೆ. ದೋಸೆಗಳನ್ನು ಕೊಬ್ಬರಿ, ಟೊಮೆಟೊ, ಶೇಂಗಾ ಚಟ್ನಿಯೊಂದಿಗೆ ಸೆವಿಸಿದರೆ ರುಚಿ ಸಖತ್ ಆಗಿರುತ್ತದೆ. ದೋಸೆ ರೆಸಿಪಿಗಾಗಿ ಎಣ್ಣೆಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಅಡುಗೆಗಳಲ್ಲಿ ಹೆಚ್ಚು ಎಣ್ಣೆ ಬಳಕೆ ಮಾಡುವುದು ಆರೋಗ್ಯಕ್ಕೂ ತೊಂದರೆಯಾಗುತ್ತದೆ.
ರುಚಿ ರುಚಿಯಾದ ಮತ್ತು ಗರಿಗರಿಯಾದ ದೋಸೆ ಅಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಸಾಮಾನ್ಯವಾಗಿ ಈರುಳ್ಳಿ, ಮಸಾಲಾ, ಮೊಟ್ಟೆ ದೋಸೆ ಹಾಗೂ ಸಾದಾ ದೋಸೆಗಳನ್ನು ತಯಾರಿಸಲಾಗುತ್ತದೆ. ನಿಯಮಿತವಾಗಿ ಒಂದೇ ರೀತಿ ದೋಸೆಗಳನ್ನು ಸೇವಿಸುವುದರಿಂದ ತುಂಬಾ ಬೇಸರ ತರಿಸುತ್ತದೆ. ಇದಕ್ಕಾಗಿಯೇ ನಾವು ನಿಮಗಾಗಿ ಮಂಗಳೂರು ಸ್ಪೆಷಲ್ ಬೆಲ್ಲದ ಮೆಂತ್ಯೆ ದೋಸೆ ರೆಸಿಪಿ ತಂದಿದ್ದೇವೆ. ಮಂಗಳೂರಿನ ವಿಶೇಷವಾದ ದೋಸೆ ರೆಸಿಪಿಯನ್ನು ಪರಿಪೂರ್ಣವಾಗಿ ತಯಾರಿಸಲು ನಾವು ತಿಳಿಸುವಂತಹ ಕೆಲವು ಹಂತಗಳನ್ನು ಅನುಸರಿಸಿದರೆ, ಈ ದೋಸೆಗಳು ಸ್ವೀಟ್ ಮತ್ತು ರುಚಿಕರವಾಗಿರುತ್ತವೆ. ಈ ದೋಸೆಯ ಮೇಲೆ ಖಾರದ ಪುಡಿ ಸಿಂಪಡಿಸಿ ಸೇವಿಸಿದರೆ ಸೂಪರ್ ಆಗಿರುತ್ತದೆ. ಈಗ ಸಖತ್ ರುಚಿಕರವಾದ ಮಂಗಳೂರು ಸ್ಪೆಷಲ್ ಬೆಲ್ಲದ ಮೆಂತ್ಯೆ ದೋಸೆ ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಅಕ್ಕಿ – ಅರ್ಧ ಕಿಲೋ (500 ಗ್ರಾಂ)
ಉದ್ದಿನಬೇಳೆ – 30 ಗ್ರಾಂ
ಅವಲಕ್ಕಿ – 30 ಗ್ರಾಂ
ದಪ್ಪ ಅಕ್ಕಿ – 30 ಗ್ರಾಂ
ಮೆಂತ್ಯೆ – 15 ಗ್ರಾಂ
ಬಡೆಸೋಂಪು – 15 ಗ್ರಾಂ
ತುರಿದ ಬೆಲ್ಲ – 50 ಗ್ರಾಂ
ಅರಿಶಿನ – ಸ್ವಲ್ಪ
ಬೆಣ್ಣೆ – ಸಾಕಷ್ಟು
ಬೆಳ್ಳುಳ್ಳಿ – 2 ಟೀಸ್ಪೂನ್
ಕೆಂಪು ಮೆಣಸಿನಕಾಯಿ – 15
ಎಳ್ಳು – 3 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅತ್ಯಂತ ರುಚಿಕರವಾದ ಮಂಗಳೂರು ಸ್ಪೆಷಲ್ ಬೆಲ್ಲದ ಮೆಂತ್ಯೆ ದೋಸೆ ಸಿದ್ಧಪಡಿಸಲು ಮೊದಲಿಗೆ, ಒಂದು ಬಟ್ಟಲಿನಲ್ಲಿ ಅರ್ಧ ಕೆಜಿ ಅಕ್ಕಿ, 30 ಗ್ರಾಂ ಮೆಂತ್ಯೆ, 15 ಗ್ರಾಂ ಸೋಂಪು, 30 ಗ್ರಾಂ ಉಪ್ಪು ಅಕ್ಕಿ, 30 ಗ್ರಾಂ ಬೇಳೆಕಾಳು ಹಾಕಿ ಎರಡು ಬಾರಿ ಸ್ವಚ್ಛವಾಗಿ ತೊಳೆಯಿರಿ. ಬಳಿಕ ಸಾಕಷ್ಟು ನೀರು ಸುರಿದು ಮೂರು ಗಂಟೆಗಳ ಕಾಲ ನೆನೆಸಿಡಿ.
ಮತ್ತೊಂದು ಕಪ್‌ನಲ್ಲಿ 30 ಗ್ರಾಂ ಅವಲಕ್ಕಿಯನ್ನು ಹಾಕಿ ಸಾಕಷ್ಟು ನೀರು ಸುರಿದು ನೆನೆಸಿಡಿ.ಮೂರು ಗಂಟೆಗಳ ಬಳಿಕ ಅಕ್ಕಿಯನ್ನು ಮತ್ತೆ ತೊಳೆದು ನೀರನ್ನು ಸೋಸಿ ಮಿಕ್ಸರ್ ಜಾರ್‌ಗೆ ಹಾಕಿ. ನೆನೆಸಿದ ಅವಲಕ್ಕಿಯನ್ನು ಸೋಸಿಕೊಳ್ಳಿ. 50 ಗ್ರಾಂ ಬೆಲ್ಲ ಮತ್ತು ಸ್ವಲ್ಪ ಅರಿಶಿನವನ್ನು ಸೇರಿಸಿ ರುಬ್ಬಿಕೊಳ್ಳಿ. ಈಗ ನೀರು ಸ್ವಲ್ಪ ಸ್ವಲ್ಪ ಸೇರಿಸಿ ಹಿಟ್ಟನ್ನು ದೋಸೆಗೆ ಬೇಕಾದ ಸ್ಥಿರತೆಗೆ ರುಬ್ಬಿಕೊಳ್ಳಿ.
