ಉದಯವಾಹಿನಿ, ಬೀದರ್: ಹುಮನಾಬಾದ್ ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತವಾಗಿ ಯುವ ಉದ್ಯಮಿಯ ದುರಂತ ಅಂತ್ಯವಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಎನ್‌ಹೆಚ್-65ರಲ್ಲಿ ನಡೆದಿದೆ. ಇಂದು ನಸುಕಿನ ಜಾವ ವೀರಭದ್ರೇಶ್ವರ ಜಾತ್ರೆಗೆಂದು ಬಸವಕಲ್ಯಾಣ ಕಡೆಯಿಂದ ಹುಮನಾಬಾದ್‌ಗೆ ತೆರಳುತ್ತಿದ್ದಾಗ ಭೀಕರ ಅಪಘಾತವಾಗಿ ಉದ್ಯಮಿ ಸಾವನ್ನಪ್ಪಿದ್ದಾರೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡದ ಪರಿಣಾಮ 30 ವರ್ಷದ ಬಸವಕಲ್ಯಾಣ ಪಟ್ಟಣದ ನಿವಾಸಿ ವಿಶ್ವಜೀತ್ ಸಾವನ್ನಪ್ಪಿದ್ದಾರೆ. ಎರ್ಟಿಗಾ ಕಾರ್‌ನಲ್ಲಿ ತೆರಳುತ್ತಿದ್ದಾಗ ಡೆಡ್ಲಿ ಆಕ್ಸಿಡೆಂಟ್ ಆಗಿ ವಿಶ್ವಜೀತ್ ದುರಂತ ಅಂತ್ಯವಾಗಿದ್ದು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
