ಉದಯವಾಹಿನಿ : ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಸಿನಿಮಾ ಆಗಿ ಉಳಿಯದೇ ಒಂದು ಸುನಾಮಿಯಾಗಿ ಮಾರ್ಪಟ್ಟಿದೆ. ಬಿಡುಗಡೆಯಾಗಿ ಎಂಟು ವಾರಗಳ ಕಳೆದರೂ ಚಿತ್ರದ ಕ್ರೇಜ್ ಕುಂದಿಲ್ಲ. ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾಗಳಾದ KGF 2 ಮತ್ತು RRR ಕಲೆಕ್ಷನ್ ದಾಖಲೆಗಳನ್ನು ಈಗಾಗಲೇ ಅಳಿಸಿಹಾಕಿರುವ ಈ ಸಿನಿಮಾ, ಈಗ ‘ಪುಷ್ಪ 2’ ದಾಖಲೆಗಳ ಮೇಲೆ ಕಣ್ಣಿಟ್ಟಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಮೊದಲ ವಾರದ ಹೊರತಾಗಿ 2ರಿಂದ 8ನೇ ವಾರದವರೆಗಿನ ಪ್ರತಿಯೊಂದು ವಾರದಲ್ಲೂ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2001ರಲ್ಲಿ ತೆರೆಕಂಡಿದ್ದ ಸನ್ನಿ ಡಿಯೋಲ್ ನಟನೆಯ ‘ಗದರ್: ಏಕ್ ಪ್ರೇಮ್ ಕಥ’ ಚಿತ್ರ ಎಂಟನೇ ವಾರದಲ್ಲಿ 1 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿತ್ತು. ಕಳೆದ 25 ವರ್ಷಗಳಿಂದ ಯಾರೂ ಮುರಿಯದ ಈ ದಾಖಲೆಯನ್ನು ‘ಧುರಂಧರ್’ ಬರೋಬ್ಬರಿ 4 ಕೋಟಿ ರೂ. ಗಳಿಸುವ ಮೂಲಕ ಅಳಿಸಿ ಹಾಕಿದೆ.
ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ‘ಧುರಂಧ‌ರ್’ ಬರೋಬ್ಬರಿ 1,340 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಾಧನೆಯೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಪ್ರಸ್ತುತ ಈ ಪಟ್ಟಿಯ ವಿವರ ಹೀಗಿದೆ:
-2000
22-1800+
ಪುಷ್ಪ2 -1700 ಕೋಟಿ
– 1340

Leave a Reply

Your email address will not be published. Required fields are marked *

error: Content is protected !!