ಉದಯವಾಹಿನಿ , ಮಾನಸಿಕ ಆರೋಗ್ಯಕ್ಕೆ ಯೋಗ ತುಂಬಾ ಅವಶ್ಯ: ಮಾನಸಿಕ ಆರೋಗ್ಯ ಎಂದರೆ ಅನಾರೋಗ್ಯದ ಅನುಪಸ್ಥಿತಿ ಮಾತ್ರವಲ್ಲ, ಆಂತರಿಕ ಶಾಂತಿ ಮತ್ತು ಸಮತೋಲನದ ಸ್ಥಿತಿ. ಯೋಗವು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ. ಇವುಗಳ ವಿರುದ್ಧ ಹೋರಾಡಲು ಅಲ್ಲ. ಆಧುನಿಕ ಜೀವನವು ತ್ವರಿತ ಪರಿಹಾರಗಳನ್ನು ಬಯಸುತ್ತದೆ. ಆದರೆ, ಯೋಗವು ತಾಳ್ಮೆಯನ್ನು ಕಲಿಸುತ್ತದೆ. ಇದಕ್ಕಾಗಿಯೇ ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುವ ಜನರು ಖಿನ್ನತೆ, ಒತ್ತಡ ಹಾಗೂ ಕಿರಿಕಿರಿಯಿಂದ ಬಳಲುವ ಸಾಧ್ಯತೆ ಕಡಿಮೆ ಇರುತ್ತದೆ.

ಆತಂಕವನ್ನು ದೂರ ಮಾಡುವ ಯೋಗ: ಆತಂಕದ ಮೂಲ ಕಾರಣ ಭವಿಷ್ಯದ ಭಯ, ವರ್ತಮಾನದಿಂದ ಸಂಪರ್ಕ ಕಡಿತ ಮೂಲಕ ಮನಸ್ಸನ್ನು ಶಾಂತವಾಗಿರುತ್ತದೆ. ಪ್ರಾಣಾಯಾಮ, ವಿಶೇಷವಾಗಿ ಅನುಲೋಮ, ವಿಲೋಮ ಮತ್ತು ಭ್ರಮರಿಯು ನರಮಂಡಲವನ್ನು ಶಾಂತಗೊಳಿಸುತ್ತದೆ. ನಿಯಮಿತವಾಗಿ ಈ ಪ್ರಾಣಾಯಾಮ ಮಾಡುವುದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ತುಂಬಾ ಸಹಾಯವಾಗುತ್ತದೆ. ಧ್ಯಾನ, ನಿಧಾನ ಉಸಿರಾಟವು ಆತಂಕವನ್ನು ಹೋಗಲಾಡಿಸಲು ಮೆದುಳಿಗೆ ಸಂಕೇತಿಸುತ್ತದೆ. ನಿಯಮಿತ ಯೋಗಾಭ್ಯಾಸವು ಆತಂಕ, ಹೆದರಿಕೆ ಮತ್ತು ಚಡಪಡಿಕೆಯ ತೀವ್ರತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ.

ಕೋಪ, ಕಿರಿಕಿರಿ ಹೋಗಲಾಡಿಸುವ ಯೋಗ: ಕೋಪವು ಹೆಚ್ಚಾಗಿ ನಿಗ್ರಹಿಸಲಾದ ಒತ್ತಡ ಮತ್ತು ಭಾವನಾತ್ಮಕ ಅಸಮತೋಲನದ ಪರಿಣಾಮವಾಗಿದೆ. ದೇಹದಲ್ಲಿ ಶಕ್ತಿಯ ಹರಿವು ನಿರ್ಬಂಧಿಸಲ್ಪಟ್ಟಾಗ, ಅದು ಕೋಪದ ರೂಪದಲ್ಲಿ ಹೊರಬರುತ್ತದೆ. ಇದಕ್ಕಾಗಿ ತಾಡಾಸನ, ಬಾಲಾಸನ ಹಾಗೂ ಶವಾಸನದಂತಹ ಯೋಗ ಆಸನಗಳು ದೇಹವನ್ನು ವಿಶ್ರಾಂತಿ ಮಾಡುತ್ತದೆ. ಇದರ ಪರಿಣಾಮವಾಗಿ ಯೋಗವು ಮನಸ್ಸಿನ ಆಕ್ರಮಣಶೀಲತೆಯನ್ನು ಕ್ರಮೇಣ ಶಾಂತಗೊಳಿಸುತ್ತದೆ. ಧ್ಯಾನ ಅಭ್ಯಾಸಗಳು ಒಬ್ಬ ವ್ಯಕ್ತಿಗೆ ಪ್ರತಿಕ್ರಿಯಿಸುವ ಮೊದಲು ಯೋಚಿಸಲು ಕಲಿಸುತ್ತವೆ. ಇದು ಯೋಗದ ನಿಜವಾದ ಶಕ್ತಿಯಾಗಿದೆ. ನಿಮ್ಮನ್ನು ಬದಲಾಯಿಸುವುದಿಲ್ಲ, ಬದಲಾಗಿ ನಿಮ್ಮನ್ನು ಸಮತೋಲನಗೊಳಿಸುತ್ತದೆ.

ನಿದ್ರಾಹೀನತೆ ದೂರವಾಗಿಸಲು ಯೋಗ ಅತ್ಯುತ್ತಮ: ನಿದ್ರಾಹೀನತೆಯು ಅತ್ಯಂತ ಸಾಮಾನ್ಯವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ನಿರಂತರ ಆಲೋಚನೆ, ಅತಿಯಾದ ಮೊಬೈಲ್ ಫೋನ್ ಬಳಕೆ ಹಾಗೂ ಮಾನಸಿಕ ಆಯಾಸವು ನಿಮ್ಮ ನಿದ್ರಾಹೀನತೆಗೆ ಕಾರಣವಾಗುತ್ತದೆ. ಮಲಗುವ ಮುನ್ನ ಅಭ್ಯಾಸ ಮಾಡುವಂತಹ ಯೋಗವು ನಿದ್ರೆ ಗುಣಮಟ್ಟವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಶವಾಸನ, ಭ್ರಮರಿ ಪ್ರಾಣಾಯಾಮವು ಮೆದುಳಿನ ಅಲೆಗಳನ್ನು ನಿಧಾನಗೊಳಿಸುತ್ತದೆ. ಆಳವಾದ ಮತ್ತು ನೈಸರ್ಗಿಕ ನಿದ್ರೆಯನ್ನು ಉತ್ತೇಜಿಸುತ್ತದೆ. ಯೋಗವು ಔಷಧಗಳಂತೆ ನಿದ್ರೆಗೆ ಒತ್ತಾಯಿಸುವುದಿಲ್ಲ. ಬದಲಾಗಿ ದೇಹವನ್ನು ನಿದ್ರೆಗೆ ಸಿದ್ಧಪಡಿಸುತ್ತದೆ, ಇದು ಯೋಗದ ದೊಡ್ಡ ಪ್ರಯೋಜನವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!