ಉದಯವಾಹಿನಿ , ನಮ್ಮಲ್ಲಿ ಹಲವರು ವಾರದಲ್ಲಿ ಎರಡ ಬಾರಿಯಾದರೂ ರುಚಿಕರವಾದ ಮಾಂಸಾಹಾರ ಊಟವನ್ನು ತಯಾರಿಸುತ್ತಾರೆ. ವೀಕೆಂಡ್​ನಲ್ಲಿ ಬಹುತೇಕರು ಜನರು ನಾನ್​ವೆಜ್​ ಮಾಡುತ್ತಾರೆ. ಮಾಂಸಾಹಾರಿಗಳು ಕೆಲವು ದಿನಗಳ ಹಿಂದೆಯೇ ಯಾವ ಮಾಂಸವನ್ನು ತಿನ್ನಬೇಕೆಂದು ಯೋಚಿಸಲು ಆರಂಭಿಸುತ್ತಾರೆ. ಹಲವರು ಕೋಳಿ, ಮಟನ್, ಮೀನು ಮತ್ತು ಸೀಗಡಿಗಳನ್ನು ಮನೆಗೆ ತಂದು ಸೇವನೆ ಮಾಡುತ್ತಾರೆ. ಅನೇಕರು ಚಿಕನ್ ಸೇವಿಸಲು ಇಷ್ಟಪಡುತ್ತಾರೆ. ಏಕೆಂದರೆ, ಇದರ ಬೆಲೆಯು ಅಗ್ಗವಾಗಿದೆ. ಇದಲ್ಲದೇ, ಇದನ್ನು ಬೇಯಿಸುವುದು ತುಂಬಾ ಸುಲಭವಾಗಿದೆ. ಚಿಕನ್ ಪ್ರಿಯರು ಚಿಕನ್ ಫ್ರೈ, ಚಿಕನ್ ಸೂಪ್, ಚಿಕನ್ ಬಿರಿಯಾನಿಯಂತಹ ಭಕ್ಷ್ಯಗಳನ್ನು ತಯಾರಿಸಿ ಸೇವಿಸುತ್ತಾರೆ.

ಕೆಲವು ಆಹಾರ ಪ್ರಿಯರು ನಾಟಿ ಚಿಕನ್ ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ ನಾಟಿ ಚಿಕನ್‌ನ ರುಚಿ ವಿಭಿನ್ನವಾಗಿದೆ. ಆರೋಗ್ಯದ ದೃಷ್ಟಿಯಿಂದ ಯಾವ ಕೋಳಿ ಉತ್ತಮ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿವೆ. ಡಾ. ಸಂತೋಷ್ ಜಾಕೋಬ್ ತಮ್ಮ ಇನಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ಗೊಂದಲಗಳನ್ನು ನಿವಾರಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಫಾರಂ ಇಲ್ಲವೇ ನಾಟಿ ಕೋಳಿ ಮಾಂಸ, ಇವರೆಡರಲ್ಲಿ ಯಾವುದು ಉತ್ತಮ ಎಂಬುದನ್ನು ತಿಳಿಯೋಣ. ಬ್ರಾಯ್ಲರ್ ಕೋಳಿ ಮಾಂಸ: ಬ್ರಾಯ್ಲರ್ ಕೋಳಿಯು ಪ್ರಾಥಮಿಕವಾಗಿ ಮಾಂಸ ಉತ್ಪಾದನೆಗಾಗಿ ಬೆಳೆಸುವ, ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ದೇಶೀಯ ಕೋಳಿಯ ತಳಿಯಾಗಿದೆ. ಬ್ರಾಯ್ಲರ್ ಕೋಳಿಗಳನ್ನು ಸಾಮಾನ್ಯವಾಗಿ ಕೋಳಿ ಸಾಕಣೆ ಕೇಂದ್ರಗಳಲ್ಲಿ ಬೆಳೆಸಲಾಗುತ್ತದೆ. ಅವು ಬೇಗನೆ ಬೆಳೆಯಲು ಸಹಾಯ ಮಾಡಲು ಅವುಗಳ ಮಾಲೀಕರು ವಿಶೇಷ ಆಹಾರವನ್ನು ನೀಡುತ್ತಾರೆ. ಈ ಕೋಳಿಗಳು 5 ರಿಂದ 9 ವಾರಗಳಲ್ಲಿ ಬೆಳೆಯುತ್ತವೆ. ಬಳಿಕ ಮಾರಾಟಕ್ಕೆ ಸಿದ್ಧವಾಗಿವೆ. ಇವುಗಳನ್ನು ಬೆಳೆಸಲು ಪ್ರತಿಜೀವಕಗಳು, ಹಾರ್ಮೋನುಗಳನ್ನು ಬಳಸಲಾಗುತ್ತದೆ ಎಂಬ ವದಂತಿಗಳೂ ಕೂಡ ಇವೆ. ಬ್ರಾಯ್ಲರ್ ಕೋಳಿಗಳು ಸಾಮಾನ್ಯವಾಗಿ ಹೆಚ್ಚಿನ ಕೊಬ್ಬಿನಂಶ, ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ.

Leave a Reply

Your email address will not be published. Required fields are marked *

error: Content is protected !!