ಉದಯವಾಹಿನಿ ಕುಶಾಲನಗರ :ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿ, ಅಲ್ಲಿನ ಸ್ಥಳೀಯರಿಂದ ಮಾಹಿತಿ ಪಡೆದರು. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಹಾಗೂ ವಣಚಲು ಪ್ರದೇಶಕ್ಕೆ ತೆರಳಿ ಮಳೆ ಹಾನಿ ಸಂಬ0ದ ಮಾಹಿತಿ ಪಡೆದರು. ಮನೆ ಹಾನಿ ಹಾಗೂ ಬರೆ ಕುಸಿತ ಪ್ರದೇಶಕ್ಕೆ ತೆರಳಿ ವೀಕ್ಷಿಸಿದ ಸಚಿವರು. ಮಳೆ ಹಾನಿ ಸಂಬAಧ ಸರ್ಕಾರದಿಂದ ನಿಯಮಾನುಸಾರ ಪರಿಹಾರ ದೊರೆಯಲಿದೆ ಎಂದು ಸಚಿವರು ಹೇಳಿದರು.
ಶಾಸಕರಾದ ಡಾ.ಮಂತರ್ ಗೌಡ ಅವರು ಗಾಳಿಬೀಡು ಪ್ರದೇಶವು ಎತ್ತರ ಪ್ರದೇಶದಲ್ಲಿದ್ದು ಹೆಚ್ಚಿನ ಮಳೆಯಾಗುತ್ತದೆ. ಇದರಿಂದ ಬರೆ ಕುಸಿತ, ಮನೆ ಹಾನಿ ಉಂಟಾಗುತ್ತಿದೆ. ಈ ಸಂಬAಧ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದು ಹೇಳಿದರು. ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಬAಧಿಸಿದAತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯವಿರುವ ಕಡೆಗಳಲ್ಲಿ ಟಾರ್ಪಲ್ ವಿತರಿಸುವಂತೆ ನಿರ್ದೇಶನ ನೀಡಿದರು. ಗಾಳಿಬೀಡು ಬಳಿಯ ಸೇತುವೆ ವೀಕ್ಷಿಸಿದ ಸಚಿವರು, ಬರೆಕುಸಿತ, ಮನೆ ಹಾನಿ, ಸೇತುವೆ, ಕಾಲುವೆ ಹಾನಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಹೊದವಾಡ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಶಾಲೆ ಬಳಿ ಕೆರೆ ಇದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶಾಲೆ ಬಳಿ ತಡೆಗೋಡೆ ನಿರ್ಮಾಣ ಮಾಡುವಂತೆ ಸಂಬ0ಧಪಟ್ಟ ಎಂಜಿನಿಯರ್‌ಗೆ ಸೂಚಿಸಿದರು. ಬೇತೂರು ಗ್ರಾಮದ ಬೋಪಣ್ಣ ಅವರ ವಾಸದ ಮನೆ ಹಿಂಭಾಗ ಬರೆ ಜರಿದಿದ್ದು, ಇದನ್ನು ಪರಿಶೀಲಿಸಿದರು. ಈ ಸ್ಥಳದಲ್ಲಿ ನಾಲ್ಕು ಅಂಗಡಿ ಮಳಿಗೆ ಮಳೆಗೆ ಹಾನಿಯಾಗಿದ್ದು ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಸ್ಥಳೀಯ ಜನಪ್ರತಿನಿಧಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!