
ಉದಯವಾಹಿನಿ ಕೊಲ್ಹಾರ: ಪತ್ರಿಕೋದ್ಯಮದ ಮೌಲ್ಯಗಳನ್ನು ಅರಿತು ನಾವುಗಳು ಜವಾಬ್ದಾರಿಯುತವಾಗಿ ಮುನ್ನಡೆಯಬೇಕಿದೆ ಎಂದು ಕಾರ್ಯ ನಿರತ ಪತ್ರಕರ್ತರ ಧ್ವನಿ ಜಿಲ್ಲಾ ಉಪಾಧ್ಯಕ್ಷ ಇರ್ಫಾನ್ ಬೀಳಗಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ,ಸಮಾಜದಲ್ಲಿ ಪತ್ರಕರ್ತರಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಜನರು ನಮ್ಮನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿರುತ್ತಾರೆ ಇತರರಿಗೆ ಮಾದರಿಯಾಗಿ ನಾವು ಬದುಕಬೆಕು ಎಂದು ಹೇಳಿದರು.ಪ್ರಸ್ತುತ ದಿನಮಾನದಲ್ಲಿ ಪತ್ರಕರ್ತರಿಗೆ ಗುರುತರವಾದ ಜವಾಬ್ದಾರಿಗಳು ಇರುವುದು ಅರಿಯಬೇಕು ಹಲವಾರು ಜ್ವಲಂತ ಸಮಸ್ಯೆಗಳಿಗೆ ಕನ್ನಡಿಯಂತೆ ಕರ್ತವ್ಯ ನಿರ್ವಹಿಸಬೇಕು. ಕೇವಲ ಹೆಸರಿಗಷ್ಟೇ ಪತ್ರಕರ್ತರು ಎನಿಸಿಕೊಳ್ಳದೆ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಬೇಕಿದೆ ಎಂದು ಹೇಳಿದರು.ಪತ್ರಿಕೋದ್ಯಮದ ಕಲಿಕೆಯಲ್ಲಿ ಪತ್ರಕರ್ತರನ್ನು ಕಾವಲುನಾಯಿ (ವಾಚ್ ಡಾಗ್) ನಂತೆ ಕಾರ್ಯ ನಿರ್ವಹಿಸಬೇಕು ಸಮಾಜ ವಿರೋಧಿಗಳನ್ನ ಬಲವಾಗಿ ವಿರೋಧಿಸಬೇಕುಊಎಂದು ತಿಳಿಸಿದಂತೆ ನಾವು ಸ್ವತಂತ್ರವಾಗಿ ಆಲೋಚಿಸಿ ಅನ್ಯಾಯ ಅಕ್ರಮದ ವಿರುದ್ಧ ದಿಟ್ಟತನದಿಂದ ವರದಿ ಮಾಡಬೇಕಿದೆ ಎಂದು ಹೇಳಿದರು.ಪ್ರಸ್ತುತ ದಿನಮಾನದಲ್ಲಿ ಪತ್ರಕರ್ತರಿಗೆ ಸಮಾಜದಲ್ಲಾಗಲಿ, ಅಧಿಕಾರಿ ವಲಯದಲ್ಲಾಗಲಿ ಬೆಲೆಯೇ ಇಲ್ಲದಂತಾಗಿದೆ. ಪತ್ರಕರ್ತರೂ ಕೂಡ ಪತ್ರಕರ್ತರಂತೆ ವರ್ತಿಸುವುದು ಕೂಡ ಅವಶ್ಯಕವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.ಈ ವೇಳೆಯಲ್ಲಿ ಅಧ್ಯಕ್ಷರಾದ ದಸ್ತಗೀರ್ ಬಿದರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಂಕರ ತೆಗ್ಗಿ,ಸಹ ಕಾರ್ಯದರ್ಶಿ ನಾಗರಾಜ ಕುಂಬಾರ, ಗ್ರಾಮೀಣ ಉಪಾಧ್ಯಕ್ಷ ಪ್ರಕಾಶ್ ದೂಡಮನಿ,ಅಶೋಕ್ ನಂದಿ,ಮಾರುತಿ ಬಾರಸ್ಕಳ, ಮತ್ತು ಸರ್ವ ಸದಸ್ಯರು ಇದ್ದರು
