ಉದಯವಾಹಿನಿ ಹೊಸಕೋಟೆ :ತಾಲೂಕಿನ ಬೈಲನರಸಾಪುರಗ್ರಾಪಂ. ವ್ಯಾಪ್ತಿಯ ಹೆಡಕನಹಳ್ಳಿ ಎಂಪಿಸಿಎಸ್‌ನ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಹೆಚ್.ಜಿ.ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ್ ಹೆಚ್.ಸಿ.ಅವಿರೋಧವಾಗಿಅಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿತ್ತು, ಪರಸ್ಪರಎಲ್ಲ ೧೧ ನಿರ್ದೇಶಕರುಗಳು ಚರ್ಚಿಸಿ ಒಮ್ಮತದೊಂದಿಗೆಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊ0ದು ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ನೂತನವಾಗಿ ಅಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಪಕ್ಷ ಭೇದ ಮರೆತು ಸಂಘವನ್ನುಆರ್ಥಿಕವಾಗಿ ಸದೃಢಗೊಳಿಸಿ, ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನೆಡಸಬೇಕು ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನುತಾಲೂಕು ಶಾಸಕ ಶರತ್ ಬಚ್ಚೇಗೌಡ, ನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್. ಧರ್ಮೇಶ್ ಶುಭಕೋರಿದರು.
ಕಾರ್ಯಕ್ರಮದಲ್ಲಿ ನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷಎಸ್. ಮಂಜುನಾಥ್,ಟಿಎಪಿಸಿಎ0ಎಸ್ ನಿರ್ದೇಶಕ ರವೀಂದ್ರ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಎಂ.ರಾಜಣ್ಣ, ನಿರ್ದೇಶಕ ರವಿಶಂಕರ್, ಗ್ರಾಪಂ. ಸದಸ್ಯರಾದ ಎನ್.ಡಿ. ಬೈರೇಗೌಡ, ನಿರ್ದೇಶಕರಾದ ಹೆಚ್.ಎನ್. ಬೈರೇಗೌಡ, ಶ್ರೀನಿವಾಸ್, ಹೆಚ್.ಸಿ.ಬೈರೇಗೌಡ, ಮುನಿರಾಜು, ಸಂಗೀತಾ, ವೆಂಕಟಲಕ್ಷö್ಮಮ್ಮ, ಸುಜಾತ, ಶಾಮಲಮ್ಮ, ಹೆಚ್.ಎ.ಪ್ರಕಾಶ್, ಮುಖಂಡರಾದ ವೆ0ಕಟಸ್ವಾಮಪ್ಪ, ಚಿನ್ನಯ್ಯಪ್ಪ, ವೆಲ್ಡಿಂಗ್‌ರವಿ, ಸುಜಯ್‌ಕುಮಾರ್, ನಾಗರಾಜ್, ಮಂಜು ಬಡಗಿ, ಮುಖ್ಯಕಾರ್ಯನಿರ್ವಾಹಕ ಹೆಚ್.ದಿವಾಕರ್ ಹಾಗೂ ಕಾಂಗ್ರೇಸ್ ಕಾಯಕರ್ತರು ಹಾಜರಿದ್ದರು.
