
ಉದಯವಾಹಿನಿ ದೇವರಹಿಪ್ಪರಗಿ: ಸರ್ಕಾರವು ನಿಗದಿಪಡಿಸಿದಂತೆ ಅಧಿಕಾರ ವಿಕೇಂದ್ರೀಕರಣ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರ ಆಡಳಿತ ಅವಧಿ ಎರಡುವರೆ ವರ್ಷದ ನಿಯಮದಂತೆ ತಾಲೂಕಿನ ಯಲಗೋಡ ಗ್ರಾಮ ಪಂಚಾಯಿತಿಗೆ ಅ-2 ರಂದು ಬುಧವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು.ಅಧ್ಯಕ್ಷರ ಸ್ಥಾನಕ್ಕೆ ಮಹ್ಮದರಫೀಕ್ ಸಯ್ಯದಪಟೇಲ ಕಣಮೇಶ್ವರ, ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಶ್ರೀದೇವಿ ಮಲಕಪ್ಪ ಮಾದರ ಅವರು ಆಯ್ಕೆ.ಗ್ರಾಪಂ ಒಟ್ಟು 14ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು, ತಲಾ 8 ಮತಗಳನ್ನು ಪಡೆದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸೋಮನಗೌಡ ಬಿರಾದಾರ ತಿಳಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ 14 ಜನ ಸದಸ್ಯರು ಪಿಡಿಒ ಎಸ್ ಕೆ ಹಡಪದ, ಕಾರ್ಯದರ್ಶಿ ಅಮಿತ್ ಗತಾಟೆ, ಲೆಕ್ಕ ಸಹಾಯಕ ಎಂ ಕೆ ಹೆಬ್ಬಾಳ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಆಯ್ಕೆಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದ ತಾಲೂಕು ಮುಖಂಡರು, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮುಖಂಡರು ಬಂದು ಸನ್ಮಾನಿಸಿ ಗೌರವಿಸಿದರು.ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಬರುವಂತ ಆಡಳಿತ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಜನಪರ ಮತ್ತು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತೇವೆ.- ಸಯ್ಯದಪಟೇಲ ಕಣಮೇಶ್ವರ. ಗ್ರಾಪಂ ಅಧ್ಯಕ್ಷರು ಯಲಗೋಡ.
