ಉದಯವಾಹಿನಿ ಸಿರುಗುಪ್ಪ : ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯಲ್ಲಿ ೩೦ ತಿಂಗಳ ಎರಡನೇ ಅವಧಿಗೆ ನಡೆದ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಕ್ಷಿö್ಮ ಉಪಾಧ್ಯಕ್ಷರಾಗಿ ಗೋವಿಂದಪ್ಪ ಅವಿರೋಧವಾಗಿ ಆಯ್ಕೆಯಾದರು.ಭೈರಾಪುರ ಗ್ರಾಮದಲ್ಲಿ ೦೭, ಗೋಸಬಾಳ್ ಗ್ರಾಮದಲ್ಲಿ ೦೬ ಸೇರಿ ಒಟ್ಟು ೧೩ ಗ್ರಾ.ಪಂ ಸದಸ್ಯರಿದ್ದಾರೆ. ಪಂಚಾಯಿತಿ ಕಾರ್ಯಾಲಯದಲ್ಲಿ ಬೆಳಿಗ್ಗೆ ೧೦ ರಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲಕ್ಷಿö್ಮ ಗಂಡ ದೊಡ್ಡಬಸಪ್ಪ, ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದಪ್ಪ ತಂದೆ ರಾಮಪ್ಪ ಅವರು ನಾಮಪತ್ರ ಸಲ್ಲಿಸಿದ್ದರು.ಪರಿಶೀಲನೆಯಲ್ಲಿ ನಾಮಪತ್ರ ಕ್ರಮಬದ್ದವಾಗಿದ್ದು, ಅವರ ವಿರುದ್ದವಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷೆಯಾಗಿ ಲಕ್ಷಿö್ಮ ಹಾಗೂ ಉಪಾಧ್ಯಕ್ಷರಾಗಿ ಗೋವಿಂದಪ್ಪರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಣೆ ಮಾಡಲಾಯಿತೆಂದು ಚುನಾವಣೆಗೆ ಗೊತ್ತುಪಡಿಸಿದ ಅಧಿಕಾರಿ ಹಾಗೂ ಸಿ.ಡಿ.ಪಿ.ಓ ಪ್ರದೀಪ್.ಜಿ ಅವರು ತಿಳಿಸಿದ್ದಾರೆ.ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಗ್ರಾ.ಪಂ. ಸದಸ್ಯರಿಂದ ಅಭಿನಂದಿಸಲಾಯಿತು.ಇದೇ ವೇಳೆ ಪಿ.ಡಿ.ಓ ಲೀಲಾವತಿ, ಕಾರ್ಯದರ್ಶಿ ಶಿವಮೂರ್ತಿ, ಮುಖಂಡರಾದ ಕೆ.ರಾಮಯ್ಯ, ಶಾಂತಮೂರ್ತಿ, ದೊಡ್ಡ ಮರಿಸ್ವಾಮಿ, ಶ್ರೀನಿವಾಸ, ಗುಂಡಾಳ್ ಈರಣ್ಣ, ಕರಣಂ ಬಸವರಾಜ, ಕೆ.ಮರೆಣ್ಣ, ಹೆಚ್.ಸೋಮನಾಯಕ, ರಾಮಾಂಜಿನಿ ಹಾಗೂ ಇನ್ನಿತರರು ಇದ್ದರು.
