ಉದಯವಾಹಿನಿ ರಾಮನಗರ : ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸವಿತಾ ಶ್ರೀಧರ್ ಮಹಿಳೆಯರಿಗೆ ಕಿವಿ ಮತ್ತು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಾಮನಗರ ತಾಲೂಕಿನ
 ಕೂಟಗಲ್ ವಲಯದ ಲಕ್ಷ್ಮೀಪುರದಲ್ಲಿ ಹಮ್ಮಿಕೊಂಡಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರ  ಕಾರ್ಯಕ್ರಮವನ್ನು  ಮಾತನಾಡಿದ ಅವರು, ವಿದ್ಯೆ ಕಲಿಯುವುದು ಜ್ಞಾನಾರ್ಜನೆಗೆ ಇದನ್ನು ಸ್ವ ಉದ್ಯೋಗ ಮಾಡಲು ಬಳಕೆ ಮಾಡಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುವುದು ಖಂಡಿತ ಎಂದು ಸಲಹೆ ನೀಡಿದರು.ಮಾನವ  ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರಿನ ಉಪನ್ಯಾಸಕ ಹರೀಶ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರಹೇಗಡೆಯವರು ಗ್ರಾಮೀಣ ಪ್ರದೇಶದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಅವರ ಕನಸು ಸಂಘದ ಪ್ರತಿಯೊಬ್ಬ ಸದಸ್ಯರು ಸ್ವಾಭಿಮಾನಿಗಳಾಗಬೇಕು ಮತ್ತು ಸ್ವವಲಂಬಿಗಳಗಬೇಕು ಎಂಬುದು ಎಂದು ಹೇಳಿದರು.ನಮ್ಮ ಯೋಜನೆಯಲ್ಲಿ ನಾಲ್ಕು ತರಬೇತಿಸಂಸ್ಥೆ ಇದ್ದು ಈ ತರಬೇತಿ ಕೇಂದ್ರದಲ್ಲಿ ಉಚಿತ ಟೈಲರಿಂಗ್, ಬ್ಯುಟಿಷಿಯನ್, ಕಂಪ್ಯೂಟರ್, ಎಂಬ್ರಾಯಿಡರಿ, ಹೈನುಗಾರಿಕೆ, ಕುರಿಸಾಗಾಣಿಕೆ, ಅಣಬೆ ಬೇಸಾಯ, ಜೀನುಕೃಷಿ ಸೇರಿದಂತೆ ಇನ್ನು ಹಲವು ತರಬೇತಿಗಳಿದ್ದು ಅದರ ಉಪಯೋಗ ಪಡೆದು ಕೊಳಲು ಸದಸ್ಯರಿಗೆ ಪ್ರೇರಣೆ  ನೀಡಿದರು.ತಾಲೂಕು ಯೋಜನಾಧಿಕಾರಿಗಳಾದ ಮುರಳೀಧರ ರವರು ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ  ಶಾಲೆಗಳಿಗೆ ಬೆಂಚು ಡೆಸ್ಕ್ ವಿತರಣೆ. ಸುಜ್ಞಾನ ನಿಧಿ ಶಿಷ್ಯವೇತನ. ಜ್ಞಾನದೀಪ ಶಿಕ್ಷಕರು.  ಜಲಮಂಗಲ ಮತ್ತು ಮಾಸಾಶನ ಕಾರ್ಯಕ್ರಮ ಗಳಿದ್ದು ಅದರ ಪ್ರಯೋಜನ ಪಡೆದು ಕೊಳ್ಳಲು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರದ ವೀರಭದ್ರಯ್ಯ.ಜನಜಾಗೃತಿ ಸದಸ್ಯರಾದ ರವೀಂದ್ರನಾಥ ಮೂರ್ತಿ.ಜ್ಞಾನವಿಕಾಸ ಸಮನ್ವಯಾಧಿಕಾರಿ   ಉಷಾ ಮತ್ತು ವಲಯದ ಮೇಲ್ವಿಚಾರಕರಾದ ಮಂಜುಳಾ. ವಲಯದ ಸೇವಾಪ್ರತಿನಿಧಿಗಳು ಸಂಘದ ಸದಸ್ಯರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!