ಉದಯವಾಹಿನಿ,ಕಾರಟಗಿ: ತಾಲೂಕಿನ ಬೇವಿನಾಳ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಆಯ್ಕೆಗೊಂಡ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದರು.
ಜುಲೈ ೧೫ರಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜಮ್ಮ ಭೀಮಣ್ಣ ಭೋವಿ ಅವಿರೋಧ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಸಮೀನಾ ಬೇಗಂ ಮಹಿಬೂಬ್ ಪಾಶಾ ಅವರು ಮತದಾನ ನಡೆದು ಆಯ್ಕೆಯಾಗಿದ್ದರು.ಪದಗ್ರಹಣದ ನಂತರ ಅಧ್ಯಕ್ಷೆ ಮಂಜಮ್ಮ ಭೀಮಣ್ಣ ಭೋವಿ ಮಾತನಾಡಿ ಅಧ್ಯಕ್ಷೆಯಾಗಿ ಆಯ್ಕೆಯಾಗಲು ಕಾರಣೀಭೂತರಾದ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ,ಹಿರಿಯ ಮುಖಂಡರಿಗೆ,ಕಾರ್ಯಕರ್ತರಿಗೆ ದನ್ಯವಾದ ತಿಳಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ವಿಷಯದಲ್ಲಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬೇಧ ಮರೆತು ಪಂಚಾಯತಿಗೆ ಬಂದ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿ ಕೆಲಸ ಮಾಡೋಣ. ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಬೇವಿನಾಳ ಗ್ರಾ.ಪಂನ್ನು ತಾಲೂಕಿಗೆ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ, ಸರ್ವ ಸಿಬ್ಬಂದಿಯ ಸಹಕಾರವೂ ಕೂಡಾ ಅತಿ ಮುಖ್ಯ ಎಂದರು.
ಪ್ರಕಾಶ ಹಿರೇಮಠ, ದಾನನಗೌಡ ಪನ್ನಾಪುರ ತಾ.ಪಂ ಮಾಜಿ ಸದಸ್ಯರು, ಹನುಮಂತಪ್ಪ ವಾಲೀಕಾರ್, ಶಿವಣ್ಣ ಎಪಿಎಂಸಿ ಮಾಜಿ ನಿರ್ಧೇಶಕ, ಶರಣಪ್ಪ ಕರಡಿ, ದೌವಲಸಾಬ್, ಗುರುಸ್ವಾಮಿ, ಅಂಜನೆಯ ಭೋವಿ ನಾಗನಕಲ್, ವಿರುಪಾಕ್ಷ ಭೋವಿ, ಸತ್ಯನಾರಾಯಣ ಬಸವಣ್ಣಕ್ಯಾಂಪ್, ನಾಗೇಶ್ವರರಾವ್ ಬಸವಣ್ಣಕ್ಯಾಂಪ್, ಶೇಷಗಿರಿರಾವ್ ಗ್ರಾ.ಪಂ ಸದಸ್ಯರಾದ ಯಮನೂರಪ್ಪ, ರವಿಕುಮಾರ್, ದೊಡ್ಡಪ್ಪ, ರಾಮಬಾಬು, ನಾಗರಾಜ್ ಪನ್ನಾಪುರ, ಮಲ್ಲಯ್ಯ ಕರಡಿ, ಅನ್ಸಾರಿ ಸಾಬ, ಪ್ರಶಾಂತ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!