ಉದಯವಾಹಿನಿ , ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯುವ ನಾಯಕ ಶುಭನ್ ಗಿಲ್ ಮಹತ್ವದ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ತವರಿನಲ್ಲಿ ಎದುರಾದ ಮುಖಭಂಗದ ಬಳಿಕ, ಬಿಸಿಸಿಐಗೆ ಹೊಸ ದಿಕ್ಕು ಬೇಕಾದ ಸಂದರ್ಭದಲ್ಲಿ ಗಿಲ್ ನೀಡಿದ ಐಡಿಯಾಗೆ ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜೆಂಟ್ ಮೆಚ್ಚುಗೆ ವ್ಯಕ್ತಪಡಿಸಿದೆ.  ರೋಹಿತ್ ಶರ್ಮಾ ಬಳಿಕ ಟೆಸ್ಟ್ ನಾಯಕತ್ವ ವಹಿಸಿಕೊಂಡಿರುವ ಗಿಲ್, ತಂಡದ ಸಿದ್ದತೆಯಲ್ಲಿ ದೊಡ್ಡ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಮುಖ್ಯ ಸಲಹೆ ಎಂದರೆ, ಯಾವುದೇ ಟೆಸ್ಟ್ ಸರಣಿಗೂ ಮುನ್ನ ಕಡ್ಡಾಯವಾಗಿ 15 ದಿನಗಳ ಪ್ರಿಪರೇಟರಿ ಕ್ಯಾಂಪ್ ಆಯೋಜಿಸುವುದು. ಈ ಶಿಬಿರದ ಮೂಲಕ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಜೊತೆಗೆ ಫಿಟೈಸ್ ಮೇಲೂ ವಿಶೇಷ ಗಮನ ನೀಡಬಹುದು ಎಂಬುದು ಗಿಲ್ ಲೆಕ್ಕಾಚಾರ.
ಇದರ ಜೊತೆಗೆ ಟೆಸ್ಟ್ ತಂಡದ ಆಟಗಾರರು ದೇಶೀಯ ಕ್ರಿಕೆಟ್‌ಗೂ ಮರಳಬೇಕು ಎಂದು ಗಿಲ್ ಸೂಚಿಸಿದ್ದಾರೆ. ಪ್ರತಿ ಡೊಮೆಸ್ಟಿಕ್ ಸೀಸನ್‌ನಲ್ಲಿ ಕನಿಷ್ಠ ಒಂದು ಅಥವಾ ಎರಡು ರಣಜಿ ಟ್ರೋಫಿ ಪಂದ್ಯಗಳನ್ನು ಟೆಸ್ಟ್ ಆಟಗಾರರು ಆಡಬೇಕು ಎಂಬುದು ಅವರ ಸಲಹೆ. ಇದರಿಂದ ಆಟಗಾರರಿಗೆ ರಿಧಮ್ ಸಿಗುವುದರ ಜೊತೆಗೆ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಗಿಲ್ ಅವರ ಈ ‘ಓಲ್ಡ್ ಸ್ಕೂಲ್’ ಪಾಲಿಸಿ ತಂಡಕ್ಕೆ ದೀರ್ಘಾವಧಿಯಲ್ಲಿ ಲಾಭ ತರಲಿದೆ ಎಂಬ ವಿಶ್ವಾಸ ಬಿಸಿಸಿಐ ವಲಯದಲ್ಲಿದೆ. ಸರಿಯಾದ ಸಿದ್ದತೆ ಇದ್ದರೆ, ಮುಂದಿನ ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಇನ್ನಷ್ಟು ದಿಟ್ಟ ಪ್ರದರ್ಶನ ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.

Leave a Reply

Your email address will not be published. Required fields are marked *

error: Content is protected !!