ಉದಯವಾಹಿನಿ , ಇಸ್ಲಾಮಾಬಾದ್: ತನಗೆ ಸಂಬಂಧವಿಲ್ಲದ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಸ್ಥಿತಿ ಈಗ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಒಂದು ಕಡೆ, ಐಸಿಸಿ ಹಾಕಿರುವ ಡೆಡ್‌ಲೈನ್‌ ಸಮೀಪಿಸುತ್ತಿದೆ, ಇನ್ನೊಂದು ಕಡೆ ಒತ್ತಡ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಬಾಂಗ್ಲಾದೇಶಕ್ಕೆ ಬೆಂಬಲ ನೀಡಲು ಹೋದ ಪಾಕ್‌ ಕ್ರಿಕೆಟ್‌ ಭವಿಷ್ಯವೇ ಅಡಕತ್ತರಿಯಲ್ಲಿ ಸಿಲುಕಿದೆ.

ಹೌದು. 2026ರ ಟಿ20 ವಿಶ್ವಕಪ್‌‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಟಗಾರರಿಗೆ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಅಧಿಕೃತ ನಿರ್ಧಾರ ಕಾಯ್ದಿರಿಸಿದೆ. ಯಾವುದೇ ಕ್ಷಣದಲ್ಲೂ ಹಿಂದೆ ಸರಿಯುವ ಸಾಧ್ಯತೆಗಳಿವೆ ಎನ್ನುವ ಮಾತು ಕೇಳಿಬರುತ್ತಿದೆ. ಮತ್ತೊಂದು ಕಡೆ ಪಾಕಿಸ್ತಾನ ಆಡದೇ ಇದ್ದರೆ ಪ್ಲ್ಯಾನ್ – ಬಿ, ಸಿ ರೆಡಿ ಮಾಡಿಕೊಂಡಿರುವ ಐಸಿಸಿ, ಉಗಾಂಡ ದೇಶವನ್ನ ಅಲರ್ಟ್ ಆಗಿರಲು ಸೂಚಿಸಿದೆ. ಪಾಕಿಸ್ತಾನ ಬರದೇ ಇದ್ದರೆ, ನಾವು ರೆಡಿ ಎಂದು ಐರ್ಲ್ಯಾಂಡ್ ಕೂಡ ಹೇಳುತ್ತಿದೆ. ಹೀಗಾಗಿ ಪಾಕ್‌ ಹೊರಗುಳಿದರೂ ಟೂರ್ನಿಗೆ ಯಾವುದೇ ತೊಂದರೆಯಿಲ್ಲ. ವಿಶ್ವಕಪ್‌ ತಯಾರಿ ಶುರು: ಪಿಸಿಬಿ ಅಧಿಕೃತ ನಿರ್ಧಾರ ಕಾಯ್ದಿರಿಸಿದ್ದರೂ, ಮತ್ತೊಂದೆಡೆ ಪಾಕ್‌ ತನ್ನ ವಿಶ್ವಕಪ್‌ ತಯಾರಿ ಮುಂದುವರಿಸಿದೆ.‌ ಆಸ್ಟ್ರೇಲಿಯಾ ವಿರುದ್ಧ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಲಾಹೋರ್‌ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ ಹೊರತಾಗಿಯೂ ಬೌಲರ್‌ಗಳ ಪರಾಕ್ರಮ ಮುಂದುವರಿದಿದೆ.ಆಸ್ಟ್ರೇಲಿಯಾದಲ್ಲಿ ನೇರ ಪ್ರಸಾರ ಬಂದ್‌: ಟಿ20 ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಆಸಕ್ತಿ ಕೊರತೆಯಿಂದಾಗಿ ಆಸ್ಟ್ರೇಲಿಯಾ ಮೀಡಿಯಾ ನೆಟ್‌ವರ್ಕ್‌ಗಳು ಪಾಕ್‌ vs ಆಸೀಸ್‌ ನಡುವಿನ ಪಂದ್ಯ ನೇರ ಪ್ರಸಾರಕ್ಕೆ ಹಿಂದೇಟು ಹಾಕಿವೆ.

ಇಂಡೋ-ಪಾಕ್‌ ಪಂದ್ಯಕ್ಕೆ ಭದ್ರತೆ ಹೆಚ್ಚಿಸಿದ ಲಂಕಾ: ಪಿಸಿಬಿ ಅಧಿಕೃತ ನಿರ್ಧಾರ ಇನ್ನೂ ಪ್ರಕಟಿಸದಿದ್ದರೂ ಶ್ರೀಲಂಕಾ ವಿಶ್ವಕಪ್‌ ಟೂರ್ನಿಗೆ ನಿಯೋಜಿಸಲಾದ ಭದ್ರತೆಯನ್ನ ಹೆಚ್ಚಳ ಮಾಡಿದೆ. ಅದ್ರಲ್ಲೂ ಫೆಬ್ರವರಿ 15 ರಂದು ನಿಗದಿಯಾಗಿರುವ ಭಾರತ ಮತ್ತು ಪಾಕ್‌ ನಡುವಿನ ಪಂದ್ಯಕ್ಕೆ ವಿಶೇಷ ಗಮನ ಹರಿಸಲಾಗಿದೆ ಎಂದು ಕ್ರೀಡಾ ಸಚಿವ ಸುನಿಲ್ ಕುಮಾರ ಗಮಗೆ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!