
ಉದಯವಾಹಿನಿ ಅಫಜಲಪುರ: ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯಿಂದ ವತಿಯಿಂದ ಪತ್ರಿಕಾ ದಿನಾಚರಣೆ ಜೊತೆಗೆ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕ.ಕಾ.ನಿ.ಪ ದ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಯಲ್ಲಾಲಿಂಗ ಪೂಜಾರಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಇದೆ ತಿಂಗಳು ಆಗಷ್ಟ 30 ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅದಲ್ಲದೇ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೇಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಹೀಗಾಗಿ ತಾಲೂಕಿನ ಎಲ್ಲಾ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಶೈಲ ಸಿಂಗೆ, ಉಪಾಧ್ಯಕ್ಷರಾದ ಚನ್ನು.ಹಿಂಚಗೇರಿ, ಕಾರ್ಯದರ್ಶಿಗಳಾದ ರಾಹುಲ ಅಣ್ಣೇನವರ, ಖಜಾಂಚಿಗಳಾದ ರವಿ ಬಡಗೇರಿ, ಸ.ಕಾರ್ಯದರ್ಶಿಗಳಾದ ಉಮೇಶ ಅಚಲೇರಿ,ಸ.ಕಾರ್ಯದರ್ಶಿಗಳಾದ ರವಿ ಗುಂಡಗುರ್ತಿ, ಸಂಪಾದಕರಾದ ಹಸನಪ್ಪ ಗುಡ್ಡಡಗಿ, ಪ್ರವೀಣಿ ಯಳಸಂಗಿ, ಅಮರ ಅಳ್ಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
