ಉದಯವಾಹಿನಿ,ಕೆ.ಆರ್.ಪೇಟೆ: ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಮೃತ ವೀರಯೋಧ ಜನಾರ್ಧನ್ ತಂದೆತಾಯಿಗೆ ಗೌರವ ಸಮರ್ಪಿಸಿದ ಸೊಳ್ಳೇಪುರ ಗ್ರಾಮಸ್ಥರು.
ತಾಲ್ಲೂಕಿನ ಸೊಳ್ಳೇಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ೭೭ ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅದ್ಯಕ್ಷ ಮಾದವ ಎಸ್ ಧ್ವಜಾರೋಹಣ ನೇರೆವೇರಿಸಿದರು.ಕಾರ್ಯಕ್ರಮದಲ್ಲಿ ಕಿಕ್ಕೇರಿ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಕೇಶವಮೂರ್ತಿ ಮಾತನಾಡಿ ಇಂದು ದೇಶಾದ್ಯಂತ ಸಡಗರ ಸಂಭ್ರಮದಿAದ ಸ್ವಾತಂತ್ರ ದಿನೋತ್ಸವವನ್ನು ಆಚರಿಸಲಾಗುತ್ತಿದೆ. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತ ದೇಶವನ್ನು ಬಿಡುಗಡೆಗೊಳಿಸಿ ಅಭಿವೃದ್ಧಿಯ ಪಥದತ್ತ ಮುನ್ನಡೆಸಿದ ಹಿರಿಯರ ತ್ಯಾಗ ಬಲಿದಾನಗಳು ಹಾಗೂ ಆದರ್ಶಗಳನ್ನು ಇಂದಿನ ಯುವ ಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಆರೋಗ್ಯವಂತ ಸದೃಢ ಸಶಕ್ತ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಅಲ್ಲದೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಲ್ಲಾರೂ ಕೈ ಜೋಡಿಸೋಣ ಮಕ್ಕಳು ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿತ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು ಎಂದರು.ಇತ್ತೀಚಿಗೆ ನಿಧನರಾದ ಕಿಕ್ಕೇರಿ ಪಟ್ಟಣದ ವೀರ ಯೋಧ ಜನಾರ್ಧನ್ ಅವರ ಸವಿ ನೆನಪಿಗಾಗಿ ಅವರ ತಾಯಿ ತಂದೆ ಭಾರತಿ ಪ್ರಕಾಶ್ ರವರಿಗೆ ಸೊಳ್ಳೇಪುರ ಗ್ರಾಮಸ್ಥರು ಮತ್ತು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ, ಗ್ರಾಮಸ್ಥರಾದ ರಾವiಣ್ಣ, ಸುರೇಶ್, ಶಂಕರ್, ಹರೀಶ್, ದಿನೇಶ್, ಅನಿಲ್, ಮಂಜುನಾಥ್, ಬಾಲು, ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಶಿಕ್ಷಕರಾದ ವಾಸು, ಬೋಜೇಗೌಡ, ರೇಖಾ, ಎಸ್.ಡಿ.ಎಂ.ಸಿ ಉಪಾದ್ಯಕ್ಷೆ ಮಂಜುಳ, ಸರ್ವ ಸದಸ್ಯರು ಸೇರಿದಂತೆ ಗ್ರಾಮಸ್ಥರು, ಶಾಲೆಯ ಮಕ್ಕಳು ಇದ್ದರು,

Leave a Reply

Your email address will not be published. Required fields are marked *

error: Content is protected !!