ಉದಯವಾಹಿನಿ, ಬೆಂಗಳೂರು: ಸ್ಪೀಕರ್ ಖಾದರ್ ಖದರ್‌ಗೆ ಸರ್ಕಾರ ಬೆಚ್ಚಿಬಿದ್ದಿದೆ. ಸ್ಪೀಕರ್ ಸಭಾತ್ಯಾಗದ ಅಪರೂಪದ ಘಟನೆಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ. ಹಾಗಾಗಿಯೇ ತಮ್ಮದೇ ಸಂಪುಟದ ಸಚಿವರಿಗೂ ಸಿಎಂ ಪತ್ರ ಬರೆದು ವಾರ್ನಿಂಗ್ ಮಾಡಿದ್ದಾರೆ. ಸರ್ಕಾರಕ್ಕೆ ಮುಜಗರ, ಶಾಸಕರ ಹಕ್ಕಿಗೆ ಚ್ಯುತಿ ಆಗಿದೆ ಎಂದು ಖಾರವಾಗಿ ಪತ್ರ ಬರೆದಿದ್ದಾರೆ. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಿಲ್ಲ. ಇದುವರೆಗೂ ಉತ್ತರ ಕಳುಹಿಸದೇ ಇರುವುದು ಶಾಸಕರುಗಳಿಗೆ ಸದನದಲ್ಲಿ ಅನಾನುಕೂಲ ಆಗಿದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇವತ್ತು ಕೂಡ ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸದ ಇಲಾಖೆಗಳ ಪಟ್ಟಿ ಉಲ್ಲೇಖಿಸಿ ಸ್ಪೀಕರ್ ಅಂಕಿ-ಅಂಶ ಬಹಿರಂಗಪಡಿಸಿದ್ರು. ನಿನ್ನೆ ಸಿಎಂ ಹೇಳಿದ್ದಾರೆ, ಇನ್ನೆರಡು ದಿನದಲ್ಲಿ ಸರಿ ಹೋಗಲಿದೆ ಅಂತಾ ಸ್ಪೀಕರ್ ಭರವಸೆ ನೀಡಿದರು. ಸರ್ಕಾರದ ಪರವಾಗಿ ಉತ್ತರ ನೀಡಿದ ಪರಮೇಶ್ವರ್, ಉತ್ತರ ಕೊಡದ ಅಧಿಕಾರಿಗಳನ್ನ ಸಸ್ಪೆಂಡ್ ಮಾಡುತ್ತೇವೆ, ನಾಳೆಯಿಂದ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
